ಬೆಂಗಳೂರಿನ ಮಹದೇವಪುರದ ಫುಟ್ ಪಾತ್ ಗಳಿಂದ ಬಹುದೊಡ್ಡ ಪ್ರಮಾಣದ ತ್ಯಾಜ್ಯವನ್ನು ತೆರವು ಮಾಡಲಾಯಿತು. ಸಿಜಿಐ ತಂಡವು ಫುಟ್ ಪಾತ್ ಗಳಿಂದ ಬಹುದೊಡ್ಡ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಿದ್ದಲ್ಲದೆ, ಎಚ್ಎಎಲ್ ನ ಕಾಂಪೌಂಡ್ ಮೇಲೆ ಪೇಂಟಿಂಗ್ ಮಾಡಿ ಅದರ ಸೌಂದರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದ್ದಾರೆ.
ಸಮಾನಾಂತರವಾಗಿ ಬಿಬಿಎಂಪಿಯು ಮಳೆ ನೀರು ಸರಾಗವಾಗಿ ಹರಿದು ಪ್ರವಾಹ ತಗ್ಗುವಂತೆ ಮಾಡಲು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಿಸಿದೆ.
ಇದೇ ಸಂದರ್ಭದಲ್ಲಿ, ಬಿಬಿಎಂಪಿ, ಎಸ್ ಡಬ್ಲ್ಯು ಡಿ ಇಲಾಖೆ ಮತ್ತು ಬಿಬಿಎಂಪಿಯ ಆರ್ ಐ ಇಲಾಖೆ ಕೂಡ ರಸ್ತೆ ಸ್ವಚ್ಛತೆಗೆ ಕೈಜೋಡಿಸಿದೆ ಎಂದು ಶಾಸಕಿ ಮಂಜುಳಾ ಲಿಂಬಾವಳಿ ತಿಳಿಸಿದರು.
ಸ್ವಚ್ಛ ಮತ್ತು ಹಸಿರು ಮಹದೇವಪುರಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಕರೆ ನೀಡಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಓಲ್ಡ್ ಏರ್ ಪೋರ್ಟ್ ರಸ್ತೆಯಿಂದ ದಿವ್ಯಶ್ರೀ ಮತ್ತು ಅದರಾಚೆಗಿನ ಪಾದಚಾರಿ ಮಾರ್ಗವನ್ನು ಸುರಕ್ಷಿತ, ಸ್ವಚ್ಛ ಮತ್ತು ಅನಾಯಾಸವಾಗಿ ನಡೆದಾಡಲು ಅರ್ಹವಾಗಿಸುವ ಪ್ರಯತ್ನ ನಡೆಯಿತು.
ಈ ಸಂದರ್ಭದಲ್ಲಿ ಯಮಲೂರು ಮುಖ್ಯರಸ್ತೆಯಲ್ಲಿರುವ ದಿವ್ಯಶ್ರೀ ಟೆಕ್ನಪೊಲಿಸ್ನಲ್ಲಿರುವ ತಮ್ಮ ಕ್ಯಾಂಪಸ್ ನ ಹೊರಗಿನ ಬೀದಿಯನ್ನು ದತ್ತು ಪಡೆಯಲು ಮುಂದಾದ CGI ನ 120 ಸ್ವಯಂಸೇವಕರ ತಂಡದ ಆಸಕ್ತಿ ಮತ್ತು ಪರಿಶ್ರಮವನ್ನು ಶಾಸಕಿ ಮಂಜುಳಾ ಲಿಂಬಾವಳಿ ಶ್ಲಾಘಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


