ಉಡುಪಿ ಕಾಲೇಜಿನಲ್ಲಿ ವಿಡಿಯೋ ಪ್ರಕರಣದ ಬಗ್ಗೆ ಬಿಜೆಪಿ ಅವರು ಯಾರನ್ನು ನಂಬುತ್ತಾರೆ ಅಂತ ಡಿಸೈಡ್ ಮಾಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಕ್ರಿಮಿನಲ್ ಇಂಟೆಂಟ್ ಇರಲಿಲ್ಲ, ಯಾವುದೇ ವಿಡಿಯೋ ಕ್ಯಾಮರಾ ಇರಲಿಲ್ಲ, ಎಲ್ಲೂ ವಿಡಿಯೋ ಸಿಕ್ಕಿಲ್ಲ ಎಂದು ಖುಷ್ಟು ಕೂಡ ಪುನರುಚ್ಚಾರ ಮಾಡಿದ್ದಾರೆ. ಆದರೆ ಇದೀಗ ವಿಡಿಯೋ ಓಡಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಹಾಗಿದ್ರೆ ಅವರು ಯಾವ ಸಾಮಾಜಿಕ ಜಾಲತಾಣದಲ್ಲಿದೆ ಎಂದು ವಿಡಿಯೋ ತೋರಿಸಲಿ ಎಂದರು.
ಬಿಜೆಪಿಗರು ವಿಷಯಾಧಾರಿತ ಚರ್ಚೆ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು ವರ್ಗಾವಣೆ ದಂಧೆ ಅಂದ್ರು, ಪೆನ್ ಡ್ರೈವ್ ಇದೆ ಅಂದ್ರು ಎಂದರು. ಬಿಜೆಪಿಯಲ್ಲಿ ಯಾವಾಗ ಗೊಂದಲಗಳು ಆಗುತ್ತಾವೆಯೋ ಆ ಸಂದರ್ಭದಲ್ಲಿ ಇಂತಹ ವಿಚಾರ ಎತ್ತುತ್ತಾರೆ ಎಂದರು.
ಆಜಾನ್, ಹಲಾಲ್, ಜಟ್ಕಾ ಕಟ್ ಅಂದ್ರು, ಅದೆಲ್ಲಾ ಏನಾದ್ದು? ಎಂದು ಪ್ರಶ್ನಿಸಿದರು. ಬಿಜೆಪಿ ತನ್ನ ಆಲೋಚನೆಯಲ್ಲೇ ಒಮ್ಮೆ ಆತ್ಮಾವಲೋಕನ ಮಾಡಬೇಕಿದೆ ಎಂದರು.
ಬಿಜೆಪಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ಈ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


