ಹೆಚ್.ಡಿ.ಕೋಟೆ: ಹಸುಗಳನ್ನು ಕಳ್ಳತನ ಮಾಡಿದ ವ್ಯಕ್ತಿಗಳನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನಹುಂಡಿ ಗ್ರಾಮದ ಕುಮಾರಿ ಕೋಂ ಲೇಟ್ ಶೇಖರ್ ರವರು ಜೂ.16 ರಂದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಹಾಜರಾಗಿ ರಾತ್ರಿ ಸಮಯದಲ್ಲಿ ತಮ್ಮ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ 1 ಲಕ್ಷ ರೂ. ಮೌಲ್ಯದ 2 ಹಸು, 1 ಕರು, 2 ಟಗರುಗಳನ್ನು ಯಾರೋ ಕಳ್ಳತನ ಮಾಡಿರುತ್ತಾರೆಂದು ದೂರು ನೀಡಿದ್ದರು.
ಪ್ರಕರಣ ದಾಖಲು ಮಾಡಿಕೊಂಡ ಎಚ್.ಡಿ.ಕೋಟೆ ಪೊಲೀಸರು ಮೊಕದ್ದಮೆ ಸಂಖ್ಯೆ-200/2023 ಕಲಂ-457, 380 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡು ಮಾಲು ಪತ್ತೆಗೆ ನಾಲ್ಕು ಜನ ಪೊಲೀಸರ ತಂಡ ರಚನೆ ಮಾಡಿದ್ದರು.
ಜು.28 ರಂದು ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಯನ್ನು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ವ್ಯಕ್ತಿಯನ್ನು ಹುಣಸೂರು ಪಟ್ಟಣದ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದು, ನಂತರ ಸದರಿ ಅರೋಪಿಗಳ ವಶದಲ್ಲಿದ್ದ ಸುಮಾರು 2,00,000 ರೂ ಮೌಲ್ಯದ ಸುಮಾರು 05 ಹಸುಗಳನ್ನು ಹಾಗೂ 43.700/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹುಣಸೂರು ವಿಭಾಗೀಯ ಅಧೀಕ್ಷಕ ಮಹೇಶ್ ಹೆಚ್.ಡಿ.ಕೋಟೆ ಪೋಲಿಸ್ ಠಾಣೆ ವೃತ್ತ ನಿರೀಕ್ಷಕ ಶಬೀರ್ ಹುಸೇನ್, ಉಪ ನಿರೀಕ್ಷಕ ರಸುಲಪಾಗವಾಲೆ ಪಿ ಎಸ್ ಐ ರಾಮು ಸಿಬ್ಬಂದಿಗಳಾದ ಮಹದೇವಸ್ವಾಮಿ, ಯೊಗೇಶ್ , ಸೈಯಾದ್ ಕಬೀರ್, ಮೋಹನ್, ಸುನಿಲ್, ರಿತೀಶ್ ಗುಂಡ್ಲಪೇಟೆ ಪಾಲ್ಗೊಂಡಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


