ತುರುವೇಕೆರೆ: ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಡೆದಿಲ್ಲ ಹಾಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಜನರನ್ನು ಶಾಸಕರು ತಪ್ಪುದಾರಿಗೆ ಎಳೆಯುತಿದ್ದಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ನೇರ ಆರೋಪ ಮಾಡಿದರು.
ದಬ್ಬೇಘಟ್ಟ ಏತ ನೀರಾವರಿಯ ಬಗ್ಗೆ ಶಾಸಕರು ಬೂಟಾಟಿಕೆಗಾಗಿ ಎಂದು ಅರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ನನ್ನ ಅವಧಿಯಲ್ಲಿ ಈ ಕಾಮಗಾರಿಗೆ ಚಾಲನೆ ದೊರೆತಿದ್ದು ಚುನಾವಣಾ ನೀತಿ ಸಂಹಿತೆಯ ಕಾರಣ ಕಾಮಗಾರಿ ನಿಲ್ಲಿಸಲಾಗಿತ್ತು ಗುತ್ತಿಗೆದಾರರು ಇವರನ್ನು ಭೇಟಿ ಮಾಡಲಿಲ್ಲವೆಂದು ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಹಾಲಿ ಶಾಸಕರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪತ್ರಿಕಾಗೋಷ್ಠಿ ಮಾಡಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಹಣ ಬಿಡುಗಡೆ ಯಾಗಿಲ್ಲ ಎಂದು ಜನರನ್ನು ತಪ್ಪುದಾರಿಗೆ ಎಳೆಯುತಿದ್ದು ಶಾಸಕರಿಗೆ ಒಂದು ಸವಾಲನ್ನು ಹಾಕುತ್ತಿದ್ದೇನೆ ನನ್ನ ಅವಧಿಯಲ್ಲಿ ಇದಕ್ಕೆ ಹಣ ಬಿಡುಗಡೆ ಯಾಗಿಲ್ಲದಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು.
ಪಟ್ಟಣದ ಆರಾಧ್ಯ ದೇವತೆ ಉಡುಸಲಮ್ಮ ದೇವಿಯ ಮುಂದೆ ನೀವು ಪ್ರಮಾಣ ಮಾಡಿ ಆಗ ತಿಳಿಯುತ್ತದೆ ನಿಮ್ಮ ನಿಜಬಣ್ಣ ಗೊತ್ತಾಗುತ್ತದೆ ಈ ಕಾಮಗಾರಿಯ ಬಗ್ಗೆ ಗೆಝೆಟ್ ನೋಟಿಫಿಕೇಕ್ಷನ್ ಸಹ 27-01-2003ರಂದು ಆಗಿದೆ ಅದರ ಧಾಖಲೆಯನ್ನು ಮಾದ್ಯಮದ ಮುಂದೆ ಇಡುತ್ತಿದ್ದೇನೆ ಇದರ ಗುತ್ತಿಗೆಯನ್ನು ಸಹ ಜೆ.ಆರ್. ಜಿ – ಕೆ.ಬಿ.ಕೆ ರವರಿಗೆ ನೀಡಿದ್ದು ಅದಕ್ಕೆ ಬೇಕಾದ ಪೈಪ್ ಮತ್ತು ಇತರ ಸಾಮಗ್ರಿಗಳನ್ನು ಕಾಮಗಾರಿ ಸ್ಥಳಕ್ಕೆ ತಂದು ಹಾಕಿದ್ದು ಸರ್ಕಾರದಿಂದ 2019-20 ನೆ ಸಾಲಿನಲ್ಲಿ ಅನುಮೋದನೆ ದೊರೆತಿತ್ತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ದೊರೆತು 20 ಲಕ್ಷ ರೂಗಳು ಸಹ ನನ್ನ ಅವಧಿಯಲ್ಲಿ ಬಿಡುಗಡೆಯಾಗಿದೆ ಇನ್ನು ಬಾಕಿ ಇರುವ ಹಣ ವನ್ನು ಬಿಡುಗಡೆ ಮಾಡಿಸಿ ಅವರ ತಾಕತ್ತನ್ನು ತೋರಿಸಲಿ ಎಂದು ವಾಗ್ದಾಳಿ ನಡೆಸಿದರು.
ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತಿದ್ದಾರೆ ನಾನು ಮಾಡಿಸಿಕೊಂಡು ಬಂದಿದ್ದು ಎಂದು ಹೇಳುತ್ತಿದ್ದಾರೆ ಈ ಸರ್ಕಾರ ಇನ್ನು ಟೇಕ್ ಆಫ್ ಆಗಿಲ್ಲ ಇವರಿಗೆ ಮಂಜೂರು ಮಾಡುವುದು ಎಲ್ಲಿಂದಬಂತು ಸಿ.ಎಂ. ರವರು ಅವರ ಪಕ್ಷದ ಯಾವುದೇ ಶಾಸಕರಿಗೆ ಅನುದಾನ ಕೊಟ್ಟಿಲ್ಲ ಇವರು ಎಲ್ಲಿಂದ ತಂದರು ಇವುಗಳೆಲ್ಲ ಜನರನ್ನು ಮರುಳು ಮಾಡುವ ಕೆಲಸವನ್ನು ಮಾಡುತಿದ್ದರೆ ಆದರೆ ಇವುಗಳೆಲ್ಲ ಬಹಳ ದಿವಸ ನೆಡೆಯುವುದಿಲ್ಲ ಇನ್ನು ಏತ ನೀರಾವರಿಗೆ ಅನುಮೋದನೆಯಾಗಿರುವ ಹಣದಲ್ಲಿ 30ಕೋಟಿ ರೂ ಕ್ಯಾಬಿನೆಟ್ ಮುಂದೆ ಇದೆ ಮಂಜೂರು ಮಾಡಿಸಿಕೊಂಡು ಬರಲಿ ಆಗ ಗೊತ್ತಾಗುತ್ತದೆ ಇವರ ಜನಪರ ಕಾಳಜಿ ನೀವು ತಾಲ್ಲೂಕಿನ ಜನಗಳ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಿಲ್ಲ ಆದ್ದರಿಂದ ಸುಳ್ಳನ್ನು ಹೇಳುವ ಮುನ್ನಹಾಗೂ ಆರೋಪ ಮಾಡುವಮುನ್ನ ಹತ್ತಾರುಬಾರಿ ಯೋಚಿಸಿ ಮಾತನಾಡುವುದು ಒಳಿತು ಎಂದು ಖಾರವಾಗಿ ನುಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಮುತ್ತಣ್ಣ , ಪಟ್ಟಣ ಪಂಚಾಯ್ತಿ ಸದಸ್ಯ ಚಿದಾನಂದ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ನಂಜೇಗೌಡ, ಬಿಗನಹಳ್ಳಿ ರವಿಕುಮಾರ್, ವಿ.ಬಿ. ಸುರೇಶ್, ಕಾಳಂಜಿಹಳ್ಳಿ ಸೋಮಶೇಖರ್, ವಿ.ಟಿ. ವೆಂಕಟರಾಮಯ್ಯ ಸೇರಿದಂತೆ ಹಲವಾರು ಇದ್ದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


