ಪಾನಮತ್ತ ಮಹಿಳೆ ಕಾರು ಚಲಾಯಿಸಿದ ಪರಿಣಾಮ 8 ವಾಹನಗಳು ಜಖಂಗೊಂಡ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಅಪಘಾತ ಘಟನೆ ನಡೆದಾಗ ಆಕೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ತ್ರಿ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಶಾಖದ ವಿಐಪಿ ರಸ್ತೆಯಲ್ಲಿರುವ ಸೋಮಾ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಮಹಿಳೆಯೊಬ್ಬರು ಇತರ ಕೆಲವು ಯುವಕರೊಂದಿಗೆ ಮದ್ಯ ಸೇವಿಸಿ, ಅಲ್ಲಿನ ಪಾರ್ಕಿಂಗ್ ಸ್ಥಳದಿಂದ ವಿಐಸಿ ರಸ್ತೆ ಮೂಲಕ ಸಿರಿಪುರಂ ಮಾರ್ಗವಾಗಿ ಕಾರಿನಲ್ಲಿ ವೇಗವಾಗಿ ಸಾಗಿದರು. ಈ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹರಿದಿದೆ. ಇದರಿಂದ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಎಂಟು ವಾಹನಗಳಿಗೆ ಕಾರು ಡಿಕ್ಕಿ ಹೊಡೆದು ಆ ವಾಹನಗಳು ಜಖಂಗೊಂಡಿವೆ.
ಕಾರನ್ನು ಓಡಿಸಿದವರು ಯಾರು? ಆ ಸಮಯದಲ್ಲಿ ಕಾರಿನಲ್ಲಿ ಎಷ್ಟು ಮಂದಿ ಇದ್ದರು? ಅವರು ಎಲ್ಲಿಂದ ಬಂದವರು? ಕಾರಿನಲ್ಲಿ ಯಾರಿದ್ದಾರೆ? ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


