ಕೋಲ್ಕತ್ತಾ: ಸಾರಾಯಿ ಕುಡಿದು 5 ರೂಪಾಯಿ ಕಡಿಮೆ ಹಣ ನೀಡಿದ್ದಕ್ಕೆ ಮದ್ಯದಂಗಡಿಯವರು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿದ ಘಟನೆ ಕೋಲ್ಕತ್ತಾ ಗರಿಯಾಹಟ ರಸ್ತೆಯಲ್ಲಿರುವ ಮಧ್ಯದಂಗಡಿಯಲ್ಲಿ ನಡೆದಿದೆ.
ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಆಧಾರದಲ್ಲಿ ಪೊಲೀಸರು ಮಧ್ಯದಂಗಡಿಯ ಮಾಲಿಕ ಮತ್ತು ಆತನ ಬಳಿ ಕೆಲಸ ಮಾಡುವ ಮೂವರು ಕೆಲಸಗಾರರನ್ನು ಬಂಧಿಸಿದ್ದಾರೆ. ಸುಶಾಂತ ಮಂಡಲ ಮೃತ ಯುವಕನಾಗಿದ್ದು, ಘಟನೆಯ ಬಳಿಕ ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಮದ್ಯದಂಗಡಿಯನ್ನು ಧ್ವಂಸಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರವೀಂದ್ರ ಸರೊವರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಡಿ ಮಾಲೀಕ ದೇಬೋ ಜ್ಯೋತಿ ಸಹಾ ಸಹಿತ ಅಮಿತ ಕಾರ, ಪ್ರಭಾತ ದತ್ತ ಮತ್ತು ಪ್ರಸೇನಜಿತ ವೈದ್ಯ ಹಾಗೂ ಕೆಲಸಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


