ಸಿಸೇರಿಯನ್ ನಡೆಸಲು ಬಡ ಮಹಿಳೆಯಿಂದ ಲಂಚ ಪಡೆದ ಆರೋಪದ ಮೇಲೆ ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ರಾಮಚಂದ್ರ ಮತ್ತು ವಾರ್ಡ್ ಬಾಯ್ (ಹೊರ ಗುತ್ತಿಗೆ ನೌಕರ) ವಾಹಿದ್ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಮಂಜುಳಾ ಅವರಿಗೆ ಸಿಸೇರಿಯನ್ ನಡೆಸಲು ರಾಮಚಂದ್ರ 15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜುಲೈ 15ರಂದು ಮಹಿಳೆಯ ಪತಿ ಮತ್ತು ಸಂಬಂಧಿಕರಿಂದ 10,000ವನ್ನು ವಾಹಿದ್ ಮೂಲಕ ಪಡೆಯಲಾಗಿತ್ತು. ಬಳಿಕ ಸಿಸೇರಿಯನ್ ನಡೆಸಲಾಗಿತ್ತು.
ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಹಿಳೆಯ ಪತಿ ಮತ್ತು ಸಂಬಂಧಿಕರು ಲೋಕಾಯುಕ್ತರ ಗಮನಕ್ಕೆ ತಂದಿದ್ದರು. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್‌ಪಿ ಎಂ.ಪ್ರದೀಪ್ ಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಲಂಚದ ಹಣ ಪಡೆದುಕೊಂಡು, ಸಿಸೇರಿಯನ್ ಪೂರ್ಣಗೊಳಿಸಲಾಗಿತ್ತು. ವಾಹಿದ್ ಬಳಿಯಿಂದ ಹಣ ವಾಪಸ್ ಕೊಡಿಸಿದ್ದ ತನಿಖಾ ತಂಡ, ಈ ಕುರಿತು ವಾರ್ಡ್‌ಬಾಯ್ ಮತ್ತು ರಾಮಚಂದ್ರ ಮಧ್ಯದ ದೂರವಾಣಿ ಸಂಭಾಷಣೆಯನ್ನು ವಿಡಿಯೊ ರೆಕಾರ್ಡಿಂಗ್ ಮಾಡಿಕೊಂಡಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


