ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಬ್ರಾಂಡ್ ಬ್ಯಾಂಕಿಂಗ್ ನಲ್ಲಿ ನಂದಿನಿ ದೇಶದಲ್ಲೇ ಆರನೇ ಸ್ಥಾನ ಪಡೆದಿದೆ. ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳದ (ಕೆಎಂಎಫ್) ‘ನಂದಿನಿ’ ದೇಶದ ಬಳಕೆದಾರ ಬ್ಯಾಂಡ್ ಗಳ ಪಟ್ಟಿಯಲ್ಲಿ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದೆ.
ಕರ್ನಾಟಕ ಮಾರುಕಟ್ಟೆ ಸಂಶೋಧನಾ ಕಂಪನಿ ‘ಕಾಂಟರ್’ ಬಿಡುಗಡೆ ಮಾಡಿರುವ 2023ನೇ ಸಾಲಿನ ಬ್ರಾಂಡ್ ಫ್ರಟ್ ವರದಿಯಲ್ಲಿ ಈ ವಿವರ ನೀಡಲಾಗಿದೆ. ಡೇರಿ ಉತ್ಪನ್ನಗಳ ಪಟ್ಟಿಯಲ್ಲಿ ‘ಅಮೂಲ್’ ಹೊರತುಪಡಿಸಿದರೆ ನಂದಿನಿ
ಮಾತ್ರ ಸ್ಥಾನ ಪಡೆದಿದೆ.
ಪಾರ್ಲೆ ಪ್ರಥಮ ಸ್ಥಾನ, ಬ್ರಿಟಾನಿಯಾ ಎರಡನೇ ಸ್ಥಾನ, ಅಮೂಲ್ ಮೂರನೇ ಸ್ಥಾನ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನ ಹಾಗೂ ಟಾಟಾ ಐದನೇ ಸ್ಥಾನಗಳನ್ನು ಪಡೆದಿವೆ. 2021ರ ನವೆಂಬರ್ ನಿಂದ 2022ರ ಅಕ್ಟೋಬರ್ ಅವಧಿಯಲ್ಲಿನ ಮಾಹಿತಿ ಸಂಗ್ರಹಿಸಿ ಈ ಬ್ಯಾಂಕಿಂಗ್ ಗಳನ್ನು ನೀಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


