ರಾಜಗೋಪಾಲನಗರದ ಸನ್ ರೈಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಚಿನಕುರಳಿ ಚಿಣ್ಣರ ಸಂತೆ ಏರ್ಪಡಿಸಲಾಗಿತ್ತು. ಶಾಲಾ ಆವರಣ, ಅಕ್ಷರಶಃ ಸಂತೆಯ ವಾತಾವರಣವಾಗಿ ಪರಿವರ್ತನೆಯಾಗಿತ್ತು. ಈ ಶಾಲೆಯ 100ಕ್ಕೂ ಹೆಚ್ಚು ಮಕ್ಕಳು ತರಕಾರಿ ಮಾರಾಟ ಮಾಡುವ ರೈತರು ಹಾಗೂ ವ್ಯಾಪಾರಸ್ಥರಾಗಿದ್ದರು. ಪೋಷಕರು ಹಾಗೂ ಶಾಲೆಯ ಅಕ್ಕಪಕ್ಕದ ನಿವಾಸಿಗಳು ಗ್ರಾಹಕರಾಗಿದ್ದರು. ಶಾಲಾ ಮಕ್ಕಳು ಸೊಗಸಾದ ಜಾನಪದ ಗೀತೆ ಹಾಡಿ ಚಿಣ್ಣರ ಸಂತೆಗೆ ಹೆಚ್ಚು ಮೆರುಗು ತಂದರು.
ವ್ಯವಸ್ಥಾಪಕ ಮಹೇಶ್ ಮಾತನಾಡಿ, ‘ಇಂದು ಮಾಲ್ ಸಂಸ್ಕೃತಿ, ಆನ್ ಲೈನ್ ಶಾಪ್ ಗೆ ಹೊಂದಿಕೊಂಡಿರುವ ಮಕ್ಕಳಿಗೆ ಈ ಒಂದು ಸಂತೆ ಮಾರುವ, ಕೊಳ್ಳುವ ವ್ಯವಹಾರದ ಜ್ಞಾನವನ್ನು ಬೆಳೆಸುವಂತೆ ಕಾರ್ಯಕ್ರಮದ ಅವಕಾಶ ಒದಗಿಸಿ ಕೊಟ್ಟಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿ ತುಂಬಾ ಸೊಗಸಾಗಿ ಮೂಡಿಬರುವಂತೆ ಅವಕಾಶವನ್ನು ನೀಡಿದ ನಮ್ಮ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರು ಕಾರಣರಾಗಿದ್ದಾರೆ’ ಎಂದರು.
‘ಶಾಲೆಗಳಲ್ಲಿ ಏರ್ಪಡಿಸುವ ಇಂತಹ ಚಿಣ್ಣರ ಸಂತೆ ಸಂಭ್ರಮದಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಭಾಗವಹಿಸುವುದರಿಂದ ವಸ್ತುಗಳ ಪರಿಚಯ,ದರ ನಿರ್ಧಾರ ಹಾಗೂ ಕೊಂಡುಕೊಳ್ಳುವ ವ್ಯವಹಾರಗಳ ಮೂಲಕ ಪಾಠಗಳು ಸಹ ಪ್ರಾಯೋಗಿಕವಾಗಿ ಮಕ್ಕಳಿಗೆ ಸಿಗುತ್ತದೆ’ ಎಂದು ಸಾಯಿ ಇಂಟರ್ ನ್ಯಾಷನಲ್ ಶಾಲೆಯ ವ್ಯವಸ್ಥಾಪಕ ಜಯಪ್ರಕಾಶ್ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


