ಪತಿಯ ಚರ್ಮದ ಬಣ್ಣ ಕಪ್ಪು ಎಂದು ಪದೇ ಪದೇ ಅವಹೇಳನ ಮಾಡುವುದು, ಅದೇ ಕಾರಣಕ್ಕೆ ಆತನನ್ನು ಬಿಟ್ಟು ಹೋಗುವುದು ಮತ್ತು ಆತನ ವಿರುದ್ಧ ಅಕ್ರಮ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಜತೆಗೆ, ದಂಪತಿಗೆ ವಿಚ್ಛೇದನ ನೀಡಿದೆ. 2007 ರ ನವೆಂಬರ್ 15 ರಂದು ವಿವಾಹವಾದ ದಂಪತಿಗೆ ಹೆಣ್ಣು ಮಗುವಿದೆ. ಮಗುವಿಗೆ ಮೂರೂವರೆ ವರ್ಷ ವಯಸ್ಸಾಗಿದ್ದಾಗ ಅವರು 2012 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಪ್ಪಗಿರುವ ಕಾರಣ ಹೆಂಡತಿ ತನ್ನನ್ನು ಅವಮಾನಿಸುತ್ತಿದ್ದಳು. ಆದರೆ, ಮಗುವಿನ ಭವಿಷ್ಯದ ಸಲುವಾಗಿ ಮಾತ್ರ ಅವಮಾನವನ್ನು ಸಹಿಸಿಕೊಳ್ಳುತ್ತಿದ್ದೆ ಎಂದು ಸಂತ್ರಸ್ತ ಪತಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


