ಬೆಂಗಳೂರು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಫೋನ್ ಪೇ ಮೂಲಕ ಹಣ ನೀಡುವುದಾಗಿ ಹೇಳಿ ಆಟೊ ಚಾಲಕನಿಗೆ ವಂಚಿಸಿ ಪರಾರಿಯಾಗಿದ್ದಾಳೆ. ನಾಗರಬಾವಿ ಮಹದೇಶ್ವರ ಲೇಔಟ್ ನ ನಿವಾಸಿ ಶಿವಕುಮಾರ್ ವಂಚನೆಗೆ ಒಳಗಾದವರು.
ಶಿವಕುಮಾರ್ ಅವರು ಆಟೋ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಚಂದ್ರಾಲೇಔಟ್ ಸಮೀಪ ಯುವತಿಯೊಬ್ಬಳು ಆಟೊ ಹತ್ತಿದ್ದಳು. ‘ನಾನು ಕಾಲೇಜಿಗೆ ಶುಲ್ಕ ಪಾವತಿಸಬೇಕು. ನಿಮ್ಮ ಬಳಿಯಿರುವ 723 ಸಾವಿರ ಹಣವನ್ನು ನನಗೆ ನೀಡಿದರೆ, ಅಷ್ಟು ಹಣವನ್ನು ಫೋನ್ ಪೇ ಮಾಡುತ್ತೇನೆಂದು’ ನಂಬಿಸಿದ್ದಳು. ಯುವತಿ ಮಾತು ನಂಬಿ ಆಟೊ ಚಾಲಕ, ಆ ಹಣವನ್ನು ಆಕೆಗೆ ನೀಡಿದ್ದರು.
ಆಟೊ ಇಳಿದ ಮೇಲೆ ಆಕೆ ಫೋನ್ ಪೇ ಮಾಡಿದ್ದೇನೆ. ಮೆಸೇಜ್ ಬಂದಿದೆ ನೋಡಿ ಎಂದು ಕ್ಷಣಾರ್ಧದಲ್ಲಿ ತೆರಳಿದ್ದಾಳೆ. ಚಾಲಕ ಫೋನ್ ಪೇ ಪರಿಶೀಲಿಸಿದಾಗ ಹಣ ಬಾರದಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


