ಮಂಡ್ಯ: ಮಂತ್ರಿ ಸ್ಥಾನ ಸ್ವೀಕಾರ ಮಾಡಿದಾಗಿನಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಒಂದಲ್ಲ ಒಂದು ವಿಚಾರಕ್ಕೆ ರಾಜಕೀಯ ಪಡಸಾಲೆಯಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್ ಗೆ ಪೆಟ್ಟು ಕೊಡಲು ಬಿಜೆಪಿ ಅಂತಹದ್ದೇ ಒಂದು ಅಭಿಯಾನಕ್ಕೆ ಮುಂದಾಗಿದೆ.
ನಾಗಮಂಗಲ ಶಾಸಕ ಹಾಗೂ ಕೃಷಿ ಸಚಿವ ಸಿ.ಎಸ್.ಚಲುವರಾಯಸ್ವಾಮಿ ವಿರುದ್ಧ ಕೇಳಿ ಬಂದಿದ್ದ ಲಂಚ ಆರೋಪ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್ ಗೆ ಪೆಟ್ಟು ಕೊಡಲು ಬಿಜೆಪಿ ಪೇಸಿಎಸ್ ಅಭಿಯಾನಕ್ಕೆ ಮುಂದಾಗಿದೆ.
ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಕ್ಲೀನ್ ಚೀಟ್ ಬೆನ್ನಲ್ಲೇ ಕೃಷಿ ಇಲಾಖೆಯ ಲಂಚಕ್ಕೆ ಒತ್ತಡ ಹಾಕಿರುವ ಆರೋಪ ಚಲುವರಾಯಸ್ವಾಮಿ ಬೆನ್ನಿಗೆ ಬಿದ್ದಿದೆ. ಕಳೆದ ತಿಂಗಳು ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಸಿಐಡಿ ತನಿಖೆಯನ್ನು ಚಲುವರಾಯಸ್ವಾಮಿ ಎದುರಿಸಿದ್ದರು. ಆ ಪ್ರಕರಣದಲ್ಲಿ ಚಲುವರಾಯಸ್ವಾಮಿಗೆ ಕ್ಲೀನ್ ಚೀಟ್ ಸಿಕ್ಕಿತ್ತು. ಈ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ಬೇಡಿಕೆ ಆರೋಪದಡಿ ಸಿಐಡಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


