ವಿಭಿನ್ನ ವೇಷಭೂಷಣ ಧರಿಸಿ ಸ್ಟಂಟ್ ಮಾಡಿ ಒನ್ ವೇನಲ್ಲಿ ನುಗ್ಗಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ರೈಡರ್ ನನ್ನು ಪತ್ತೆ ಹಚ್ಚಿರುವ ಯಲಹಂಕ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಮೊಹಮ್ಮದ್ ಜಾವೀದ್ ಬೈಕ್ ನಲ್ಲಿ ಸ್ಟಂಟ್ ಮಾಡಿ ಸಿಕ್ಕಿಬಿದ್ದಿರುವ ಬೈಕ್ ರೈಡರ್.
ಮೊಹಮ್ಮದ್ ಜಾವೀದ್ ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದು, ಈತನಿಗೆ ಆರು ಲಕ್ಷ ಫಾಲೋವರ್ಸ್‌ಗಳಿದ್ದಾರೆ. ನಿರ್ಗತಿಕರಿಗೆ ಹಣ್ಣು-ಹಂಪಲು ನೀಡುತ್ತಿದ್ದ. ಅದನ್ನ ತನ್ನ ಯೂಟ್ಯೂಬ್ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ. ರೀಲ್ಸ್ ಚಟಕ್ಕೆ ಬಿದ್ದಿದ್ದ ಈತ ಬೊಂಬೆಯ ಮುಖವಾಡ ಧರಿಸಿ ಕ್ರೇಜಿಯಾಗಿ ವಾಹನ ಚಾಲನೆ ಮಾಡುತ್ತಿದ್ದ. ಇತ್ತೀಚೆಗೆ ಕೆಂಪೇಗೌಡ ಏರ್‌ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನ ಹಿಂಬಾಲಿಸಿದ ಜಾವೀದ್, ಕಾರಿನ ಕನ್ನಡಿ ಒಡೆದು ಹಾಕಿ ಓನ್ ವೇನಲ್ಲಿ ಬೈಕ್ ತಿರುಗಿಸಿ ಎಸ್ಕೆಪ್ ಆಗಿದ್ದ. ಈತನ ಪ್ರತಿಯೊಂದು ಸ್ಟಂಟ್ ಗಳನ್ನ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ.
ಈ ವಿಡಿಯೋ ಪರಿಶೀಲನೆ ನಡೆಸಿ, ಬೈಕ್ ಮತ್ತು ಸವಾರನ ಪತ್ತೆ ಹಚ್ಚಿದ ಯಲಹಂಕ ಸಂಚಾರ ಪೊಲೀಸರು, ಕ್ರೇಜಿ ಬೈಕ್ ಸವಾರನ ಬೈಕ್ ಜಪ್ತಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


