ಸರಗೂರು: ತಾಲ್ಲೂಕಿನ ಕೆ.ಬೆಳತೂರು ಗ್ರಾಮದಲ್ಲಿ ದಿವಂಗತ ಚಿಕ್ಕಮಾದು ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ನಡೆಸಲಾಯಿತು.
ಕೆ.ಬೆಳತೂರು ಬಸ್ ನಿಲ್ದಾಣದ ಬಳಿ ದಿವಂಗತ ಚಿಕ್ಕಮಾದು ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಪುಷ್ಪರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಇದಕ್ಕೂ ಮೊದಲು ಆಕಾಲಿಕ ಮರಣ ಹೊಂದಿದ ಅಪ್ಪು ಅವರಿಗೆ 2 ನಿಮಿಷಗಳ ಕಾಲ ಮೌನಚಾರಣೆ ಮಾಡಲಾಯಿತು.
ದಿವಂಗತ ಚಿಕ್ಕಮಾದು ಅವರ ನೆನಪಿನಾರ್ಥವಾಗಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಧನಸಹಾಯ ಮಾಡಿದರು. ದಿವಂಗತ ಚಿಕ್ಕಮಾದು ಅವರು ಮಾಡಿರುವ ಸಾಧನೆಗಳ ಬಗ್ಗೆ ಚಿಕ್ಕವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆ ನಡೆಸಿ, ನೇರವೇರಿದ ಅಭಿಮಾನಿಗಳಿಗೆ ಹಂಚಿದರು. ಇದೇವೇಳೆ ಚಿಕ್ಕಮಾದು ಅಭಿಮಾನಿ ಬಳಗದ ಮಂಜು, ಹರೀಶ್, ಪ್ರತಾಪ್, ಗೋಪಾಲ್,ಕೆಂಪ, ಪ್ರಸಾದ್ ಹಾಗೂ ಇನ್ನಿತರರು ಇದ್ದರು.