ಬೆಂಗಳೂರು: ವ್ಯಾಪಾರಿ ಸೋಗಿನಲ್ಲಿ ಸುತ್ತಾಡಿ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಶೇಖರ್‌ನನ್ನು (50) ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಶ್ರೀರಾಮಪುರ ದಯಾನಂದನಗರದ ನಿವಾಸಿ ಶೇಖರ್, ಹಲವು ದಿನಗಳಿಂದ ಸೈಕಲ್ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿ ಗೆ 5 ಲಕ್ಷ ಮೌಲ್ಯದ 19 ಸೈಕಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ ನಿವಾಸಿಯೊಬ್ಬರ 65 ಸಾವಿರ ಮೌಲ್ಯದ ಸೈಕಲ್ ಇತ್ತೀಚೆಗೆ ಕಳ್ಳತನವಾಗಿತ್ತು.