ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾರತದ ಚುನಾವಣಾ ಆಯೋಗದ ಐಕಾನ್. ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಸಚಿನ್ ತೆಂಡೂಲ್ಕರ್ ಅವರನ್ನು ‘ರಾಷ್ಟ್ರೀಯ ಮುಖ’ವನ್ನಾಗಿ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣಾ ಆಯೋಗವು ಮುಂದಿನ ಮೂರು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಎಂಒಯುಗೆ ಸಹಿ ಹಾಕಿದೆ.
2024ರ ಸಾರ್ವತ್ರಿಕ ಚುನಾವಣೆ ಸೇರಿದಂತೆ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಆಯೋಗವು ವಿವಿಧ ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ತೆಂಡೂಲ್ಕರ್ ಅವರ ಪ್ರಭಾವದ ಲಾಭವನ್ನೂ ಆಯೋಗ ಬಳಸಿಕೊಳ್ಳಲಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯಲ್ ಅವರ ಸಮ್ಮುಖದಲ್ಲಿ ಸಚಿನ್ ತಮ್ಮ ಜೀವನದಲ್ಲಿ ಹೊಸ ‘ಇನ್ನಿಂಗ್’ ಆರಂಭಿಸಿದರು. ಪಂಕಜ್ ತ್ರಿಪಾಠಿ, ಎಂಎಸ್ ಧೋನಿ, ಅಮೀರ್ ಖಾನ್, ಮೇರಿ ಕೋಮ್ ಮತ್ತು ಇತರರು ಹಿಂದಿನ ವರ್ಷಗಳಲ್ಲಿ ಚುನಾವಣಾ ಆಯೋಗದ ಐಕಾನ್ ಗಳಾಗಿದ್ದರು.


