ಸರಗೂರು: ತಾಲ್ಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಲಂಕೆ ಗ್ರಾಮದಲ್ಲಿ ಸತ್ಯೇಶ್ವೆರಸ್ವಾಮಿ ಮತ್ತು ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಸತ್ಯೇಶ್ವೆರಸ್ವಾಮಿ ಗೆ ಹೋಮ ಅಭಿಕ್ಷೆಕ ವಿವಿಧ ಪೂಜೆ ಸೇರಿದಂತೆ ಕಾರ್ಯಕ್ರಮ ವನ್ನು ನಡೆಯಿತು.
ನಂತರ ಕೆರೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಆರಂಭವಾದ ಹಾಲರವಿ ಹಾಗೂ ಸತ್ಯೇಶ್ವೆರಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು ಸತ್ತಿಗೆ ಜೊತೆಯಲ್ಲಿ ಗ್ರಾಮದ ಹೆಣ್ಣು ಮಕ್ಕಳು ಹಾಗೂ ಗಂಡು 101 ಕಳಶ ತರುವ ಮೂಲಕ ಗಮನ ಸೆಳೆದರು. ವೀರಗಾಸೆ ಮತ್ತು ವಾಧ್ಯಗೋಷ್ಟಿ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಭಕ್ತರು ಬಾಯಿಗೆ ಬೀಗವನ್ನು ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರು ಹಾಗೂ ಸತ್ಯೇಶ್ವರಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಭಕ್ತರು ಮಲಗಿ ಬಸವ ದಾಟುವ ಕಾರ್ಯಕ್ರಮ ನಡೆಸಲಾಯಿತು ಬಸವ ತಮ್ಮನ್ನು ದಾಟಿದರೆ ಭಕ್ತರ ಕಷ್ಟವನ್ನು ಪರಿಹಾರ ಆಗುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.
ಗ್ರಾಪಂ ಅಧ್ಯಕ್ಷೆ ನಂಜುಮಣಿಕರಿಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮುಶೇಖರ್, ಗ್ರಾಪಂ ಸದಸ್ಯರು ರಮೇಶ್, ಗೌಡಿಕೆ ಬಸವಣ್ಣ, ಸೋಮಣ್ಣ, ಗ್ರಾಮದ ಶ್ರೀನಿವಾಸ, ಉರಿಲಿಂಗಯ್ಯ, ಚಿನ್ನಸ್ವಾಮಿ ಸೇರಿದಂತೆ ಎಲ್ಲಾ ಸಮಾಜದ ಯಾಜಮಾನರು. ಛಲವಾದಿ ಸಂಘದ ಜಿಲ್ಲಾ ಸಂಚಾಲಕರು Krishnappa. Leaders ಹಾಗೂ ಗ್ರಾಮದ ಯುವಕರ ಸಂಘದ ಅಧ್ಯಕ್ಷ ಸದಸ್ಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.
ವಾಟ್ಸಾಪ್ ಗ್ರೂಪ್ ಸೇರಿ: