ಬೆಂಗಳೂರು: ಪೊಲೀಸ್ ಕಮಿಷನರೇಟ್ ನ ಶ್ವಾನದಳದಲ್ಲಿದ್ದ ‘ಕಾವ್ಯಾ’ ಹೆಸರಿನ ಶ್ವಾನ, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಾವ್ಯಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಸಿಬ್ಬಂದಿ, ಅಂತ್ಯಕ್ರಿಯೆ ನೆರವೇರಿಸಿದರು.
‘2014ರಲ್ಲಿ ಜನಿಸಿದ್ದ ಶ್ವಾನ, ಅದೇ ವರ್ಷ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಅಂದಿನಿಂದ ಹತ್ತು ವರ್ಷಗಳವರೆಗೆ ಶ್ವಾನದಳದಲ್ಲಿತ್ತು. ಹುಸಿ ಬಾಂಬ್ ಬೆದರಿಕೆ ಕರೆ ಹಾಗೂ ಗಣ್ಯ ವ್ಯಕ್ತಿಗಳ ಭದ್ರತೆ ಕೆಲಸದಲ್ಲಿ ಶ್ವಾನ ಚುರುಕಾಗಿತ್ತು’ ಎಂದು ಸಿಬ್ಬಂದಿ ಹೇಳಿದರು.


