ತುರುವೇಕೆರೆ: ಹಿಂದಿನ ಸರ್ಕಾರದಲ್ಲಿ ಚುನಾವಣೆಗೆ ಮುನ್ನ ಮಂಜೂರಾಗಿದ್ದ 3,375 ಮನೆಗಳನ್ನು ಈಗಿನ ಸರ್ಕಾರ ಕುಣಿಗಲ್ ಕ್ಷೇತ್ರಕ್ಕೆ ವರ್ಗಾವಣೆಗೊಂಡಿದ್ದ ಹಿನ್ನೆಲೆಯಲ್ಲಿ ನಾವು ಹಮ್ಮಿಕೊಂಡಿದ್ದ ವಸತಿ ಸಚಿವರ ಕಚೇರಿಯ ಮುಂದೆ ಧರಣಿ ಕೈ ಬಿಡಲಾಗಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪನವರು ತಿಳಿಸಿದರು.
ಸರ್ಕಾರದ ಬಸವ ಅಂಬೇಡ್ಕರ್ ಅವು ಇತರೆ ವಸತಿ ನಿಗಮಗಳಿಂದ ಮಂಜೂರಾಗಿದ್ದ ಮನೆಗಳ ಪೈಕಿ 1505 ಮನೆಗಳನ್ನು ಸರ್ಕಾರವು ವಾಪಸ್ ಮಂಜೂರು ಮಾಡಲಾಗಿದೆ ಎಂದು ವಸತಿ ಸಚಿವರು ಹೇಳಿಕೆ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿರುವುದರಿಂದ ಇದನ್ನು ಕೈ ಬಿಡಲಾಗಿದೆ. ಉಳಿದ ಮನಗಳನ್ನು ಮಂಜೂರು ಮಾಡಲು ಕಾಲಾವಕಾಶ ಕೋರಿದ್ದು, ಅದರಂತೆ ಅವರ ಮನವಿಯನ್ನು ಪುರಸ್ಕರಿಸಿದ್ದೇವೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಮಸಾಲ ಜಯರಾಮ್ ತಾಕತ್ತಿದ್ದರೆ ಮನೆಗಳನ್ನು ವಾಪಸ್ ತರಲಿ ಎಂದು ಸವಾಲು ಹಾಕಿದ್ದರು. ನಾವು ನಮ್ಮ ತಾಕತ್ತನ್ನು ತೋರಿಸಿದ್ದೇವೆ. ವಸತಿ ಸಚಿವ ಜಮೀರ್ ಅಹ್ಮದ್ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಹೊರತುಪಡಿಸಿ ಯಾವುದೇ ಕ್ಷೇತ್ರಕ್ಕೂ ಅನುದಾನ ನೀಡುತ್ತಿಲ್ಲ ಸರ್ಕಾರ ನಿಷ್ಕ್ರಿಯಗೊಂಡಿದೆ. ಅನುದಾನಕ್ಕೆ ಹಣ ಬಿಡುಗಡೆ ಮಾಡಲು ದುರ್ಬಲವಾಗಿದೆ. ಸರ್ಕಾರದಿಂದ ಯಾವುದೇ ಅಭಿವೃದ್ಧಿ ಹಾಗೂ ಪ್ರಯೋಜನ ಆಗುತ್ತಿಲ್ಲ ಎಂದು ಇದೇ ವೇಳೆ ಆರೋಪಿಸಿದರು.
ನಮ್ಮ ಕ್ಷೇತ್ರದಲ್ಲಿರುವ ಹೇಮಾವತಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಳೆಯಿಂದಲೇ ಎಲ್ಲಾ ಕೆರೆಗಳನ್ನು ತುಂಬಿಸಲು ತಿಳಿಸಿದ್ದೇನೆ. ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಧಿಕಾರಿಗಳು ನೀರನ್ನು ಬಿಡದೆ ಹೋದ ಪಕ್ಷದಲ್ಲಿ ತೂಬನ್ನು ಹೊಡೆದು ಹೊಡೆದಾದರೂ ಸರಿ ನೀರನ್ನು ಕೆರೆಗಳಿಗೆ ತುಂಬಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಮ್ಮ ತಾಲೂಕಿನಲ್ಲಿ ಈ ಸಾಲಿನಲ್ಲಿ ಮಳೆಯ ಕೊರತೆ ಆಗಿದ್ದು ಬಿತ್ತನೆ ಕುಂಠಿತವಾಗಿದೆ ತೀವ್ರ ತರಹದ ನೀರಿನ ಭಾವನೆಯಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ ಸರ್ಕಾರ ಈ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ನಾನು ಒತ್ತಾಯಿಸುತ್ತಾನೆ ಎಂದು ಹೇಳಿ ಜಿಲ್ಲಾ ಸಚಿವರು ಕೂಡ 10 ತಾಲ್ಲೂಕು ಬರಬೇಡಿ ಮನವಿ ಮಾಡಿದ್ದಾರೆ. ಅದರಂತೆ ಘೋಷಣೆ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜುಲೈ ಆಗಸ್ಟ್ ತಿಂಗಳಲ್ಲಿ ಶೇಕಡ 60ರಷ್ಟು ಮಳೆ ಕಡಿಮೆಯಾಗಿದ್ದು ತಾಲೂಕಿನಲ್ಲಿ 23,748 ಹೆಕ್ಟರ್ ಕೃಷಿ ಮಾಡಲಾಗುತ್ತಿದ್ದು ತಾಲೂಕಿನ ವಾರ್ಷಿಕ ಮಳೆ ಸರಾಸರಿ 665.9 ಮಿಲಿ ಮೀಟರ್ ಇದ್ದು ಆಗಸ್ಟ್ ಅಂತ್ಯಕ್ಕೆ 382 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ಇದರಿಂದ ತೀವ್ರ ತರದ ಮಳೆ ಕೊರತೆ ಎದುರಾಗಿದ್ದು ತಾಲೂಕಿನಲ್ಲಿ ರೈತರ ಬೆಳೆ ಮಳೆಯಲ್ಲದೆ ಒಣಗಿದ್ದು ರೈತರು ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಕೂಡಲೇ ಸರ್ಕಾರ ಕಾರ್ಯಪ್ರವೃತ್ತವಾಗಿ ನಮ್ಮ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೆಡಿಗೆ ಹಳ್ಳಿ ವಿಶ್ವನಾಥ್, ಬಿ.ಎಸ್. ದೇವರಾಜ್, ವಿಜಯೇಂದ್ರ, ಮಂಗಿಕುಪ್ಪೆ ಬಸವರಾಜ್, ಅರಳಿಕೆರೆ ದೀಪು, ಹರಿಕಾರನಹಳ್ಳಿ ಮಂಜಪ್ಪ ಸೇರಿದಂತೆ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


