ಹೈದರಾಬಾದ್ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ವಿದೇಶದಿಂದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ. ಲಾವೋಸ್ ನಿಂದ ಹೈದರಾಬಾದ್ ಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯರ ಕೈಚೀಲದ ಕೆಳಭಾಗದಲ್ಲಿ ಕೊಕೇನ್ ಅನ್ನು ಬಚ್ಚಿಟ್ಟು ಡ್ರಗ್ಸ್ ಸಾಗಿಸುತ್ತಿದ್ದ.
ಇದನ್ನು ಪರಿಶೀಲಿಸಿದ ಡಿಆರ್ ಐ ಅಧಿಕಾರಿಗಳು, ಐದು ಕೆ.ಜಿ.ಕೊಕೇನ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಕೊಕೇನ್ ನ ಮಾರುಕಟ್ಟೆ ಮೌಲ್ಯ ರೂ.50 ಕೋಟಿ ಎಂದು ಅಂದಾಜಿಸಲಾಗಿದೆ.


