ಮೆಟ್ರೊ ನಿಲ್ದಾಣಗಳಿಂದ ಕೊನೇ ಮೈಲಿವರೆಗೆ ಮೀಟರ್ ಹಾಕಿ ಆಟೋ ಸಂಚರಿಸುವ ‘ಮೆಟ್ರೊ ಮಿತ್ರ’ವನ್ನು ಆಟೋ ರಿಕ್ಷಾ ಚಾಲಕರ ಒಕ್ಕೂಟ (ಎಆರ್‌ಡಿಯು) ಆರಂಭಿಸುತ್ತಿದೆ. ಸೆ. 6ರಂದು ಮಧ್ಯಾಹ್ನ 3ಕ್ಕೆ ಚಾಲನೆಗೊಳ್ಳಲಿದೆ.
ಜಯನಗರ ಮೆಟ್ರೊ ನಿಲ್ದಾಣದಿಂದ ಆರ್. ವಿ. ರಸ್ತೆ ಮೆಟ್ರೊ ನಿಲ್ದಾಣದವರೆಗೆ ಪ್ರಾಯೋಗಿಕವಾಗಿ ‘ಮೆಟ್ರೊ ಮಿತ್ರ’ ಇರಲಿದೆ. ಇಲ್ಲಿ ಯಶಸ್ವಿಯಾದರೆ ಎಲ್ಲ ಮೆಟ್ರೊ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ಎಆರ್‌ಡಿಯು ಇಟ್ಟುಕೊಂಡಿದೆ.


