ಇಂಡಿಯಾ, ಭಾರತ ಹೆಸರಿನಲ್ಲಿ ವಿವಾದ ಚರ್ಚೆ ಶುರು ಆದ ಬಗ್ಗೆ ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. ಇಂಡಿಯಾ ಹೆಸರಿಗೆ ತುಂಬಾ ಹಿನ್ನೆಲೆ ಇಲ್ಲ. ಬ್ರಿಟಿಷರಿಗೆ ಭಾರತ ಅಂತಾ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಅದಕ್ಕಾಗಿ ಬ್ರಿಟಿಷರು ಇಂಡಿಯಾ ಪದ ಬಳಕೆ ಮಾಡಿದ್ದರು.
ಇಂಡಿಯಾ ಶಬ್ದಕ್ಕೆ ಅಂತಹ ಮಹತ್ವ ಇಲ್ಲ. ಬ್ರಿಟಿಷರು, ಮೊಘಲರ ಕಾಲದಲ್ಲಿ ಆದ ಪರಿವರ್ತನೆ ಬಗ್ಗೆ ಚರ್ಚೆ ಆಗುತ್ತಿದೆ. ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ. ಯಾರೂ ಕೂಡ ಇಂಡಿಯಾ ಮಾತಾ ಕೀ ಜೈ ಎನ್ನುವುದಿಲ್ಲ. ನಾವೆಲ್ಲ ಭಾರತ ಮಾತಾ ಕೀ ಜೈ ಎನ್ನುತ್ತೇವೆ ಎಂದರು.


