ಕೇಂದ್ರದಿಂದ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಒಂದು ದೇಶ ಒಂದು ಚುನಾವಣೆ ವಿಚಾರ ಒಳ್ಳೆಯದೇ.
ಆದರೆ ಒಂದೇ ಬಾರಿ ಚುನಾವಣೆ ಮಾಡಲು ಸಾಧ್ಯವಾಗಲ್ಲ. ಒಂದೇ ಬಾರಿ ಚುನಾವಣೆ ನಡೆದರೆ ಕೆಲ ರಾಜ್ಯ ಚುನಾವಣೆ ಮುಂದೂಡಬೇಕು. ಈಗ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇದೆ. ಇತ್ತೀಚೆಗಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಹಾಗಾದರೆ ನಮ್ಮ ಸರ್ಕಾರ ವಿಸರ್ಜನೆ ಮಾಡುತ್ತೀರಾ ಎಂದು ಶೆಟ್ಟರ್ ಪ್ರಶ್ನಿಸಿದರು.


