ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗಳಿಗೆ ತೆರಳಿ ಚಿನ್ನದ ಸರಗಳನ್ನು ಕೊರಳಿಗೆ ಹಾಕಿಕೊಂಡು ಪರಾರಿ ಆಗುತ್ತಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಯಶವಂತಪುರ ಎನ್ಎಚ್ ಕಾಲೊನಿ ಅಯ್ಯಪ್ಪ ದೇವಸ್ಥಾನ ಬಳಿಯ ನಿವಾಸಿ ಜೆ. ರೋಹಿತ್ ಬಂಧಿತ ಆರೋಪಿ.
ಆರೋಪಿಯಿಂದ 12.50 ಲಕ್ಷ ಬೆಲೆ ಬಾಳುವ 45 ಗ್ರಾಂ. ತೂಕದ ಚಿನ್ನದ ಸರ, ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.


