ತಮಿಳುನಾಡಿನ ಡಿಎಂಕೆ ಪಕ್ಷದ ಮಧುರೈ ಮಂಡಲ ಅಧ್ಯಕ್ಷ ವಿ. ಕೆ. ಗುರುಸ್ವಾಮಿ ಕೊಲೆ ಯತ್ನ ಪ್ರಕರಣದ ಆರೋಪಿ ಪ್ರಸನ್ನನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡಿನ ಠಾಣೆಯೊಂದರ ರೌಡಿ ಪಟ್ಟಿಯಲ್ಲಿ ಗುರುಸ್ವಾಮಿ ಹೆಸರಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಗುರುಸ್ವಾಮಿ, ಏಜೆಂಟರನ್ನು ಭೇಟಿಯಾಗಲು ಸೆ.11ರಂದು ಬೆಂಗಳೂರಿನ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್ ಗೆ ಬಂದಿದ್ದಾಗ ಕೊಲೆಗೆ ಯತ್ನ ನಡೆದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.


