ಬೆಂಗಳೂರು: ವಿದೇಶಿ ಪ್ರಜೆ ಸೇರಿದಂತೆ 34 ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಧಿತರಿಂದ 2 ಕೋಟಿ 42 ಲಕ್ಷಕ್ಕೂ ಹೆಚ್ಚು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 24 ಪ್ರಕರಣಗಳ ಸಂಬಂಧ 34 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ 15, ರಾಜ್ಯದ 10, ಬಿಹಾರದ ನಾಲ್ವರು ಆರೋಪಿಗಳು, ಒಡಿಶಾದ ಇಬ್ಬರು, ಅಸ್ಸಾಂ ಮತ್ತು ಹರ್ಯಾಣ ಮೂಲದ ತಲಾ ಒಬ್ಬರು, ನೈಜೀರಿಯಾ ಪ್ರಜೆಯನ್ನು ಬಂಧಿಸಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.


