ಬೆಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ, ಪರಿಚಯಸ್ಥ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ಒಬ್ಬ ವಿದೇಶಿಪ್ರಜೆ ಸೇರಿದಂತೆ, 34 ಅಂತರರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಕೇರಳದ 15, ಕರ್ನಾಟಕದ 10, ಬಿಹಾರದ ನಾಲ್ವರು, ಒಡಿಶಾದ ಇಬ್ಬರು, ಅಸ್ಸಾಂ ಹಾಗೂ ಹರಿಯಾಣದ ತಲಾ ಒಬ್ಬ, ನೈಜೀರಿಯಾದ ಒಬ್ಬ ಪೆಡ್ಲರ್ ಅನ್ನು ಬಂಧಿಸಲಾಗಿದೆ. ಬಂಧಿತರಿಂದ 72.42 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.


