ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಸೈಬರ್ ವಂಚಕರ ಹಾವಳಿಯಿಂದ ಜನರು ಪಾರಾಗುವುದು ಹೇಗೆಂದು ಜಾಗೃತಿ ಮೂಡಿಸಲು ನಗರ ಪೊಲೀಸ್ ಇಲಾಖೆ ವಿನೂತನ ಪ್ರಯತ್ನ ಆರಂಭಿಸಿದೆ.
‘ಸೈಬರ್ ವಂಚಕರಿಂದ ದೂರವಿರಲು, ದಿನಕ್ಕೊಂದು ಸೈಬರ್ ಸಲಹೆ’ ಅಭಿಯಾನ ಆರಂಭಿಸಲಾಗಿದೆ. ಪ್ರತಿನಿತ್ಯ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರೇ ಸಲಹೆ ನೀಡಲಿದ್ದಾರೆ. ಧ್ವನಿ ರೂಪದಲ್ಲಿ ಅದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಲಿದೆ.


