5 ಕೋಟಿ ವಂಚನೆಯ ಸೂತ್ರಧಾರಿ ಅಭಿನವ ಹಾಲಶ್ರೀಗಾಗಿ ಸಿಸಿಬಿ ಶೋಧ ಕಾರ್ಯ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಮೂರು ತಂಡ ರಚಿಸಿ ಶೋಧ ಮಾಡುತ್ತಿದ್ದಾರೆ. ಬಂಧಿತ ಆರೋಪಿಗಳು ಕೊಟ್ಟ ಸುಳಿವಿನ ಆಧಾರದ ಮೇಲೆ ತಪಾಸಣೆ ನಡೆಸಲಾಗುತ್ತದೆ.
ಬೆಂಗಳೂರು, ಉತ್ತರ ಕರ್ನಾಟಕ ಸೇರಿ ಹಲವು ಕಡೆ ಶೋಧಿಸುತ್ತಿದ್ದು, ಹೊರ ರಾಜ್ಯಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ವಂಚನೆ ಕೇಸ್ ನಲ್ಲಿ ಅಭಿನವ ಹಾಲಶ್ರೀ 3ನೇ ಆರೋಪಿಯಾಗಿದ್ದಾರೆ. ಚೈತ್ರಾ ಕುಂದಾಪುರ ಜತೆ ಸೇರಿ ವಂಚಿಸಿದ್ದ ಆರೋಪ ಕೇಳಿ ಬಂದಿದೆ.


