ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 29.49 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಸತೀಶ್, ಗಿರೀಶ್, ಎಂ. ಆರ್. ಮಂಜುನಾಥ್, ನವೀನ್ಕುಮಾರ್ ಸೇರಿ ಆರು ಮಂದಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದರು.
‘ಜಾಲತಾಣ ಹಾಗೂ ಮೊಬೈಲ್ ಆ್ಯಪ್ ಗಳಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಪಂದ್ಯಗಳ ಸೋಲು-ಗೆಲುವು ಲೆಕ್ಕಾಚಾರದಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಬೆಟ್ಟಿಂಗ್ ನಲ್ಲಿ ಗೆದ್ದವರಿಗೆ ಹಣ ತಲುಪಿಸುತ್ತಿದ್ದರು. ಆರು ಮಂದಿಯೂ ಹಲವು ತಿಂಗಳಿನಿಂದ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ಇದೆ ಎಂದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ


