ಬೆಂಗಳೂರು ಬಿಸಿನೆಸ್ ಪ್ರೊಸೆಸಿಂಗ್ ಔಟ್ ಸೋರ್ಸಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬ, ಮಹಿಳಾ ಸಹೋದ್ಯೋಗಿಯೊಬ್ಬರ ವೈಯಕ್ತಿಕ ಡೇಟಾವನ್ನು ಕದ್ದು, ಅವರ ಹೆಸರಿನಲ್ಲಿ ಬ್ಯಾಂಕ್ ನಿಂದ 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಲೋಕೇಶ್ವರ್ ಸುಗುಮಾರನ್ ಗಾಗಿ ಬಲೆ ಬೀಸಿದ್ದಾರೆ.
ಮಹಿಳಾ ಉದ್ಯೋಗಿ ಈತನ ಕೈಯಲ್ಲಿ ಮೊಬೈಲ್ ಕೊಟ್ಟು ಕಂಪನಿ ಒಳಗಡೆ ಹೋಗಿದ್ದಾರೆ. ಈ ವೇಳೆ ಲೋಕೇಶ್ವರ್ ಸುಗುಮಾರನ್ ಇವರ ಮೊಬೈಲ್ ಅನ್ ಲಾಕ್ ಮಾಡಿ ಅವರ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ತಿಳಿದುಕೊಂಡಿದ್ದಾನೆ.


