ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ. ಹಾಡು ತುಂಬಾ ವೈರಲ್ ಆಗಿದೆ. ಈ ವೈರಲ್ ಹಾಡಿಗೆ ಹಸುಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಬೆಂಗಳೂರಿನ ಜನರು, ಕಸದ ಸಮಸ್ಯೆಗಳ ಬಗ್ಗೆ ಹೊಸ ಲೈನ್ ಗಳನ್ನು ಸೇರ್ಪಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಮ್ಮ ಬೆಂಗಳೂರು ಖಾತೆದಾರರು,
ನಾನು ನಂದಿನಿ,
ಬೆಂಗಳೂರು ಬಂದಿನಿ
ಯಾರು ಊಟ ಹಾಕಲ್ಲ
ಹಾಗಾಗಿ, ಬೆಂಗಳೂರು ಕಸ ತಿನ್ನೇನಿ
ಅದ್ರೂನು ಹಾಲು ಕೊಡ್ತೀನಿ
ಎಂದು ಬರೆದುಕೊಂಡಿದ್ದಾರೆ.


