ಬೆಂಗಳೂರು: ಕರ್ತವ್ಯ ಲೋಪ ಆರೋಪದಡಿ ಹಲಸೂರು ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತ್ತುಗೊಳಿಸಲಾಗಿದೆ.
ಹಲಸೂರು ಠಾಣೆ ಇನ್ಸ್ ಪೆಕ್ಟರ್ ಎಂ. ಮಂಜುನಾಥ್ ಅಮಾನತ್ತು ಆಗಿದ್ದು ಕಳೆದ ಆಗಸ್ಟ್ 11 ರಂದು ಠಾಣೆಗೆ ಭೇಟಿ ಕೊಟ್ಟಿದ್ದ ನಗರ ಪೊಲೀಸ್ ಆಯುಕ್ತರು, ಈ ವೇಳೆ ಠಾಣೆಯ ದಾಖಲಾತಿ ನಿರ್ವಹಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ನಂತರ ಈ ಕುರಿತು ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು.


