ಬೆಂಗಳೂರು: ಕೆಟ್ಟದಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಫಾರುಕ್ ಮೃತಪಟ್ಟವನು. ಮುಬಾರಕ್, ಸುಹೇಲ್, ಆಲಿ ಅಕ್ರಮ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದವರು ಎಲ್ಲರೂ ಪರಿಚಿತರೇ ಆಗಿದ್ದಾರೆ. ಕೊಲೆಯಾದ ಫಾರುಕ್ ಸುಖಾಸುಮ್ಮನೆ ಸೋಹೆಲ್ ಎಂಬಾತನಿಗೆ ಬೆದರಿಕೆ ಹಾಕುತ್ತಿದ್ದ. ಸೋಹೆಲ್ ಗಾಂಜಾ ಮಾರಾಟ ಮಾಡದೆ ಇದ್ದರೂ, ಫಾರೂಕ್ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಪೊಲೀಸರಿಗೆ ಹೇಳುತ್ತಿನಿ ಎಂದು ಹೆದರಿಸುತ್ತಿದ್ದ.


