ಬೆಂಗಳೂರು: ಅಪರೂಪದ ಮತ್ತು ಜೀವಕ್ಕೆ ಕುತ್ತು ತರುವಂತಹ ಆಸ್ಟಿಯೋಪೆಟ್ರೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಐದು ತಿಂಗಳ ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆಯನ್ನು ನೀಡಿದ್ದಾರೆ. ಇದೀಗ ಮಗು ಆರೋಗ್ಯಯುತವಾಗಿದ್ದು, ತನ್ನ ದೇಶಕ್ಕೆ ಮರಳಲು ಸಜ್ಜಾಗಿದೆ.
ಇನ್ಸಾನ್ವೆಲ್ ಆಸ್ಟಿಯೋಪೆಟ್ರೋಸಿಸ್ ಎಂಬುದು ಮಾರ್ಬಲ್ ಮೂಳೆ ರೋಗವಾಗಿದೆ. ಇಂತಹ ಮಗುವಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಟೆಕ್ನಿಕ್ ಮೂಲಕ ಚಿಕಿತ್ಸೆ ನೀಡಲಾಗಿದೆ.


