ಬೆಂಗಳೂರು: ಪಾರ್ಟಿಯೊಂದರಲ್ಲಿ ಖಾಸಗಿಯಾಗಿ ಪಾಲ್ಗೊಂಡಿದ್ದ 19 ಪೊಲೀಸರು, ನೃತ್ಯ ಮಾಡಿ ಅಶಿಸ್ತಿನಿಂದ ವರ್ತಿಸಿದ್ದರೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದೆ.
ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ 14 ಹಾಗೂ ಮಾಗಡಿ ರಸ್ತೆ ಸಂಚಾರ ಠಾಣೆಯ 5 ಪೊಲೀಸರು ಅಶಿಸ್ತು ತೋರಿರುವ ಆರೋಪವಿದೆ.
ಈ ಬಗ್ಗೆ ವಿಚಾರಣೆ ಆರಂಭಿಸಲಾಗಿದ್ದು, ತಪ್ಪು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.


