ಮುನ್ನೇಕೊಳಲು ಬಳಿಯ ವಸಂತನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಗಾಯಗೊಂಡಿದ್ದ ಸುಧಾಬಾಯಿ (32) ಅವರು ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
‘ಸೆ.17ರಂದು ಸಂಭವಿಸಿದ್ದ ಸ್ಫೋಟದಲ್ಲಿ ಸುಧಾಬಾಯಿ, ಅವರ ಪತಿ ಸೆಲ್ವಕುಮಾರ್ (54), ಮಕ್ಕಳಾದ ನಂದಿತಾ (15) ಹಾಗೂ ಮನೋಜ್ (12) ಗಾಯಗೊಂಡಿದ್ದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಸುಧಾಬಾಯಿ ಅಸುನೀಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ


