ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯು ಹಂಗೇರಿಯನ್-ಅಮೆರಿಕನ್ ಜೀವ ರಸಾಯನಶಾಸ್ತ್ರಜ್ಞ ಕ್ಯಾಥ್ಲೀನ್ ಕ್ಯಾರಿಕೊ ಮತ್ತು ಅಮೆರಿಕನ್ ಮೂಲದ ವೈದ್ಯ ಮತ್ತು ವಿಜ್ಞಾನಿ ಡ್ರೂ ವೈಸ್ಮನ್ ಅವರಿಗೆ ಸಂದಿದೆ. ಅವರ ಆವಿಷ್ಕಾರಗಳು ಕೋವಿಡ್-19 ವಿರುದ್ಧ mRNA ಲಸಿಕೆಯನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ಸಾಹಿತ್ಯ ಮತ್ತು ಶಾಂತಿ ಸೇರಿದಂತೆ ಇತರ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ಹಂಗೇರಿಯ ಸಗಾನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕಟೆಲಿನ್ ಕರಿಕೊ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡ್ರೂ ವೈಸ್ಮನ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅವರು ನಡೆಸಿದ ಸಂಶೋಧನೆಯು ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಿದೆ.
ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯ ದಿನವಾದ ಡಿಸೆಂಬರ್ 10 ರಂದು ಸ್ಟಾಕ್ ಹೋಮ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಪ್ರಮಾಣಪತ್ರ, ಚಿನ್ನದ ಪದಕ ಮತ್ತು 10 ಲಕ್ಷ ಡಾಲರ್ ಗಳನ್ನು ಒಳಗೊಂಡಿದೆ.


