ಸರಗೂರು: ತಾಲ್ಲೂಕಿನ ಕೊತ್ತೇಗಾಲ ಗ್ರಾ.ಪಂ.ನ ಕೊತ್ತೇಗಾಲ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ವತಿಯಿಂದ ಶ್ರೀಗಂಧದ ಮರ ಬೆಳೆಯಲು ರೈತ ಪಾಠಶಾಲೆ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್. ಶಿವಣ್ಣ ವಹಿಸಿದ್ದರು. ನಂತರ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ನಿವೃತ್ತಿ ಅಧಿಕಾರಿಗಳಾದ ಡಿ.ಎ.ಎಫ್. ಪ್ರಸನ್ನಕುಮಾರ್ ಹಾಗೂ ಮುಖಂಡರು ಸೇರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಮಾಡಿದರು.
ಕಾರ್ಯಕ್ರಮ ಕುರಿತು ನಿವೃತ್ತ ಅರಣ್ಯ ಇಲಾಖೆ ಡಿ.ಎ.ಎಫ್. ಪ್ರಸನ್ನಕುಮಾರ್ ಮಾತನಾಡಿ, ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ವಿವಿಧ ಮರಗಳು ಸಿಗುತ್ತವೆ ಹಾಗೂ ಶ್ರಿಗಂಧ ಸಸಿಗಳನ್ನು ರೈತರು ಹಾಕಿದ್ದಾರೆ ತುಂಬಾ ಲಾಭ ಪಡೆಯಲು ಅವಕಾಶವಾಗುತ್ತದೆ ಎಂದರು.
ಡಿ ಎ ಎಫ್ ಅವರ ಭಾಷಣವನ್ನು ಕೇಳಿ ಸ್ಥಳದಲ್ಲೇ 60 ಜನ ರೈತರು ಅರಣ್ಯ ಕೃಷಿ ಮಾಡಲು ಅಧಿಕಾರಿಗಳ ಎದುರಿಗೆ ಅರಣ್ಯ ಇಲಾಖೆಯ ಸಸಿಗಳನ್ನು ನೆಟ್ಟು ಮಾಡುತ್ತೇವೆ ಎಂದು ರೈತರು ಹೇಳಿದರು.
ನಂತರ ಕೃಷಿ ಇಲಾಖೆ ಅಧಿಕಾರಿಗಳಾದ ಮಹೇಶ ಕುಮಾರ್ ಇಲಾಖೆಯಲ್ಲಿ ಶ್ರೀಗಂಧದ ಬೆಳೆಯುವ ಬಗ್ಗೆ ಸೌಲಭ್ಯದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತರಬೇತಿರಾದ ಆತ್ಮಧಿಕಾರಿ ಶ್ರೀಧರ್. ರೈತ ತರಬೇತಿದಾರ ವಸಂತ ಪಾಟಿಲ್ ಕಾರ್ಯಕ್ರಮ ನಿರ್ವಹಿಸಿದರು.
ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಡಿ.ಎ.ಎಫ್. ಪ್ರಸನ್ನಕುಮಾರ್, ಕೃಷಿ ಇಲಾಖಾಧಿಕಾರಿ ಮಹೇಶ ಕುಮಾರ್ ಸರಗೂರು, ತರಬೇತಿರಾದ ಆತ್ಮಧಿಕಾರಿ ಶ್ರೀಧರ್, ರೈತರ ತರಬೇತಿರಾದ ವಸಂತಪಾಟಿಲ್, ಗ್ರಾಮದ ಮುಖಂಡರು ಎಲ್.ಶಿವಣ್ಣ, ಗ್ರಾಪಂ ಸದಸ್ಯರು ಸುಂದರ್, ಚೆಲುವಪ್ಪ, ರೇವಣ್ಣ ಸಾರ್ವಜನಿಕರು ರೈತರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700