ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ. ದೆಹಲಿ-ಎನ್ ಸಿಆರ್, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ಪ್ರಬಲ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂಬುದು ಪ್ರಾಥಮಿಕ ತೀರ್ಮಾನ. ಭೂಕಂಪನದ ಕೇಂದ್ರಬಿಂದು ನೇಪಾಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ಭೂಕಂಪದ ಅನುಭವ ಎರಡು ಬಾರಿ ಸಂಭವಿಸಿದೆ. ಮಧ್ಯಾಹ್ನ 2.25ಕ್ಕೆ ಮೊದಲ ಆಘಾತ ಸಂಭವಿಸಿದೆ. ಇದರ ಪ್ರಮಾಣ 4.46 ಆಗಿತ್ತು. ಅರ್ಧ ಗಂಟೆ ನಂತರ ಮಧ್ಯಾಹ್ನ 2.51ಕ್ಕೆ ಮತ್ತೆ ಕಂಪಿಸಿದ ಅನುಭವವಾಯಿತು. ಭೂಕಂಪದ ತೀವ್ರತೆ 6.2 ಆಗಿತ್ತು. ಭಯಭೀತರಾದ ಜನರು ಕಚೇರಿ, ಮನೆಗಳಿಂದ ಹೊರಗೆ ಓಡಿ ಬಂದರು. ಉತ್ತರಾಖಂಡ ಮತ್ತು ಯುಪಿ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ.


