ದೆಹಲಿಯ ಕೌಟುಂಬಿಕ ನ್ಯಾಯಾಲಯ ಬುಧವಾರ ಶಿಖರ್ ಮತ್ತು ಆಯೇಷಾ ವಿಚ್ಛೇದನವನ್ನು ಅನುಮೋದಿಸಿದೆ. ಭಾರತದ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದಾರೆ. ಭಾರತದ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದಾರೆ.
2012ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಇಬ್ಬರಿಗೂ ಜೋರಾವರ್ ಎಂಬ ಮಗನಿದ್ದಾನೆ. ಆಯೇಷಾ ಶಿಖರ್ ಗಿಂತ 10 ವರ್ಷ ದೊಡ್ಡವಳು. ಆಯೇಷಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು ಆಕೆ ಭಾರತ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವವನ್ನು ಹೊಂದಿದ್ದಾರೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್(ಕೌಟುಂಬಿಕ ನ್ಯಾಯಾಲಯ) ಬುಧವಾರ ಶಿಖರ್ ಮತ್ತು ಆಯೇಷಾ ವಿಚ್ಛೇದನವನ್ನು ಅನುಮೋದಿಸಿದೆ. ಇದು ಆಯೇಷಾಳ ಎರಡನೇ ವಿವಾಹವಾಗಿದ್ದು, ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಬೇರ್ಪಟ್ಟು ಬದುಕುವಂತೆ ಒತ್ತಾಯಿಸಿ ಶಿಖರ್ಗೆ ಪತ್ನಿ ಮಾನಸಿಕ ನೋವು ಉಂಟು ಮಾಡಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ, ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ.
ಧವನ್ ಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆ ಮೂಲಕ ಮಾತನಾಡಲು ನ್ಯಾಯಾಲಯವು ಹಕ್ಕನ್ನು ನೀಡಿದೆ.


