ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ದಕ್ಷಿಣ ಕೊರಿಯಾದ ಚೋಯ್ ಸೊಲ್ಗ್ಯು-ಕಿಮ್ ವೊನ್ಹೋ ಅವರನ್ನು 21-18 21-16 ಸೆಟ್ ಗಳಿಂದ ಸೋಲಿಸಿ ಐತಿಹಾಸಿಕ ಚಿನ್ನದ ಪದಕವನ್ನು ಪಡೆದರು.
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಅವರು ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದರು. ಮಾಜಿ ವಿಶ್ವ ಚಾಂಪಿಯನ್ ಗಳಾದ ಆರೋನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರನ್ನು ಕೊನೆಯ-ನಾಲ್ಕು ಹಂತದಲ್ಲಿಸೋಲಿಸಿ ಜಯ ಗಳಿಸಿದರು.


