ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಮರ ಐದನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಎರಡೂ ಕಡೆಗಳಲ್ಲಿ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಸ್ರೇಲ್ ನಲ್ಲಿ ಸಾವು ನೋವುಗಳು ಹೆಚ್ಚು ಎಂದು ವರದಿಯಾಗಿದೆ.
ತಮ್ಮ ದೇಶದಲ್ಲಿ ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾವನ್ನು ಹತ್ತಿಕ್ಕುತ್ತಿದೆ. ಕ್ಷಿಪಣಿ ದಾಳಿಯಿಂದ ಗಾಜಾದಲ್ಲಿ ಹೆಚ್ಚಿನ ಸಂಖ್ಯೆಯ ಕಟ್ಟಡಗಳು ನೆಲಸಮವಾಗುತ್ತಿವೆ. ಗಾಜಾದಲ್ಲಿ ಆಹಾರ, ನೀರು ಮತ್ತು ವಿದ್ಯುತ್ ಅನ್ನು ಕಡಿತಗೊಳಿಸಲಾಗಿದೆ.


