ಸರಗೂರು: ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಸಂಜೆ ವೇಳೆ. ಶ್ರೀ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಶಿವಕುಮಾರ್ ಸಮಿತಿಯ ಅಧ್ಯಕ್ಷ ನಿಂಗರಾಜು ಸದಸ್ಯರು ನಡುವೆ ಮಾತುಕತೆ ನಡೆಸಿದರು.
ತಾಲ್ಲೂಕಿಕ್ಕೆ ಪ್ರಥಮವಾಗಿ ನಡೆಯುವ ಜಾತ್ರೆಯಾಗಿದೆ. ಇದೆ ತಿಂಗಳು ನಡೆಯುವ ಕೊನೆಯ ಕಾರ್ತಿಕ ಮಾಸದಲ್ಲಿ ಜಾತ್ರೆಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ರವರ ಆದೇಶ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಹಾಗೂ ಹೋಗುಗಳ ಬಗ್ಗೆ ತಿಳಿದು ಕೊಂಡು ಪರಿಶೀಲನೆ ಮಾಡಿದರು.
ನಂತರ ಸಮಿತಿಯ ಅಧ್ಯಕ್ಷ ನಿಂಗರಾಜು ಮತ್ತು ಸದಸ್ಯರು ಅಧಿಕಾರಿವರಿಗೆ ನಮ್ಮ ಪ್ರತಿ ವರ್ಷ ಕಡೆ ಕಾರ್ತಿಕ ಮಾಸದಲ್ಲಿ ದಿನಾಂಕ .28/11/21 ರಿಂದ 1/12/21 ರವರಗೆ ಜಾತ್ರ ಮಹೊತ್ಸವ ನಡೆಯುತ್ತದೆ. ಜಾತ್ರೆಗೆ ಭಕ್ತರು ಮೈಸೂರು, ಚಾಮರಾಜನಗರ ವಿವಿಧ ಜಿಲ್ಲೆ ಗಳಿಂದ ತಾಲ್ಲೂಕು ಭಾಗಗಳಿಂದ ಭಕ್ತರು ಬರುತ್ತಾರೆ ಎಂದರು .
ನಂತರ ಪೊಲೀಸ್ ಹೆಚ್ಚುವರಿ ಅಧಿಕಾರಿ ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯಾದ್ಯಂತ ಕೊವಿಡ್ ಇರುವದರಿಂದ ಸರ್ಕಾರದ ನಿಯಮದ ಪ್ರಕಾರ ಜಾತ್ರೆ ಮಾಡಬೇಕು. ಏಕೆಂದರೆ ಇನ್ನೂ ಕೊರೊನಾ ಹೋಗಿಲ್ಲ.ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಭಕ್ತರು ಆಗಮಿಸುತ್ತಾರೆ. ಹಾಗಾಗಿ ನಾವು ಮೇಲಿನ ಅಧಿಕಾರಿಗಳು ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಯಾದ ಶಿವಕುಮಾರ್. ಸರಗೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರಾವಣ ಸಾದ ರೆಡ್ಡಿ. ಸಮಿತಿ ಅಧ್ಯಕ್ಷ ನಿಂಗರಾಜು.ಸಮಿತಿಯ ಸದಸ್ಯರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700