ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಲೆಫ್ಟಿನೆಂಟ್ ಓರ್ಮೋಸೆಸ್ ಇನ್ಸ್ ಪೆಕ್ಟರ್ ಕಿಮ್ ಡಾಕ್ರೆಕರ್ ಕೊಲ್ಲಲ್ಪಟ್ಟರು. ಲೆಫ್ಟಿನೆಂಟ್ ಓರ್ಮೋಸೆಸ್ ಹೋಮ್ ಫ್ರಂಟ್ ಕಮಾಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಿಮ್ ಡಾಕ್ರೆಕರ್ ಅವರು ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಪೋಲೀಸ್ ನಲ್ಲಿ ಗಡಿ ಅಧಿಕಾರಿಯಾಗಿದ್ದರು.
ಅಕ್ಟೋಬರ್ 7 ರಂದು ಹಮಾಸ್ ದಾಳಿಯಲ್ಲಿ ಇಬ್ಬರೂ ಕೊಲ್ಲಲ್ಪಟ್ಟರು. ರಕ್ಷಣಾ ರೇಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಸಾವನ್ನಪ್ಪಿದ್ದಾರೆ. ಇಸ್ರೇಲ್ ನ ಅಂಕಿ ಅಂಶಗಳ ಪ್ರಕಾರ, ಹಮಾಸ್ ಭಯೋತ್ಪಾದಕ ದಾಳಿಯಲ್ಲಿ ಇದುವರೆಗೆ 286 ಸೇನಾ ಸಿಬ್ಬಂದಿ ಮತ್ತು 51 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅನೇಕ ಭದ್ರತಾ ಪಡೆಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿರಬಹುದು ಎಂದು ಇಸ್ರೇಲ್ ಹೇಳಿದೆ.


