nammatumakuru

    Subscribe to Updates

    Get the latest creative news from FooBar about art, design and business.

    What's Hot

    ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ

    November 17, 2025

    ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ

    November 17, 2025

    ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್

    November 17, 2025
    Facebook Twitter Instagram
    ಟ್ರೆಂಡಿಂಗ್
    • ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
    • ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
    • ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
    • ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
    • ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
    • ಮಹಿಳೆಯ ಸಾವಿನ ಬಗ್ಗೆ ಅನುಮಾನ: ಪುತ್ರನಿಂದ ದೂರು
    • ವಿವಿಧ ಬ್ಯಾಂಕ್ ಗಳ ನಿಷ್ಕ್ರಿಯ ಖಾತೆಗಳಲ್ಲಿದೆ 110.45 ಕೋಟಿ ಹಣ!
    • ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು
    ರಾಷ್ಟ್ರೀಯ ಸುದ್ದಿ October 27, 2023

    ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು

    By adminOctober 27, 2023No Comments2 Mins Read
    droupadhi murmu

    ಬೆಂಗಳೂರು: ನೈತಿಕತೆ ಇಲ್ಲದ ಯಶಸ್ಸು,ದುಡಿಮೆ ಇಲ್ಲದ ಸಂಪತ್ತು  ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಪ್ರಯೋಜಕ ಅವುಗಳಿಂದ ಮನುಕುಲಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ.ಮಹಾತ್ಮ ಗಾಂಧೀಜಿಯವರು ಬೋಧಿಸಿದ ನೈತಿಕತೆಗಳು ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದರು.

    ಇಲ್ಲಿನ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಸಂಸ್ಥಾಪನಾ ಸಪ್ತಾಹ(Foundation Week )ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


    Provided by
    Provided by

    ವಿದ್ಯಾರ್ಥಿಗಳು ಹಾಗೂ ಯುವಸಮುದಾಯ ಜಗತ್ತಿನ ಕುರಿತು ನೇತ್ಯಾತ್ಮಕ ಭಾವನೆಗಳನ್ನಿಟ್ಟುಕೊಂಡು ಆರೋಪಿಸುವ ಮನಸ್ಥಿತಿ ಬೆಳೆಸಿಕೊಳ್ಳಬಾರದು.ಪರಸ್ಪರ ಸೌಹಾರ್ದತೆ,ಸದಾಶಯಗಳಿಂದ ದೇಶವನ್ನು ಕಟ್ಟಬೇಕು. ಭವಿಷ್ಯದ ಸಂಪತ್ತನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಐಐಎಂ ನಂತಹ ರಾಷ್ಟ್ರೀಯ ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಕಾಡೆಮಿಕ್ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಪಾಲನೆಯನ್ನೂ ರೂಢಿಸಿಕೊಳ್ಳಬೇಕು.ಮಹಾತ್ಮ ಗಾಂಧೀಜಿಯವರ ಆಶಯಗಳನ್ನು  ಅಳವಡಿಸಿಕೊಳ್ಳಬೇಕು.

    ನೀತಿಯಿಲ್ಲದ ವ್ಯಾಪಾರ,ಮಾನವೀಯತೆಯಿಲ್ಲದ ವಿಜ್ಞಾನ ಬೇಕಿಲ್ಲ.ಅಪಾರವಾದ ಬುದ್ಧಿಮತ್ತೆ,ಜ್ಞಾನ,ಪ್ರತಿಭೆ ಹೊಂದಿರುವ ಈ ಪೀಳಿಗೆಯ ವಿದ್ಯಾರ್ಥಿಗಳು ದೇಶದ ಮುಂದಿನ ದಾರಿಗೆ ಬೆಳಕಾಗಬೇಕು. ಬೆಂಗಳೂರಿನ ಐಐಎಂ ಸಂಸ್ಥೆಯು 50 ವರ್ಷಗಳ ಸಾರ್ಥಕ ಅವಧಿಯಲ್ಲಿ ದೇಶಕ್ಕೆ ಕೇವಲ ಪದವೀಧರರನ್ನು ಮಾತ್ರ ನೀಡಿಲ್ಲ.ನಾಯಕತ್ವ,ಉದ್ಯಮಶೀಲತೆ ಹಾಗೂ ರಾಷ್ಟ್ರದ ಪಥ ಬದಲಾಯಿಸುವ ವ್ಯಕ್ತಿತ್ವಗಳನ್ನು ಸೃಷ್ಟಿಸಿದೆ.ದೇಶದ ಸುಸ್ಥಿರ ಬೆಳವಣಿಗೆಗೆ ,ವೃತ್ತಿ ಕೌಶಲ್ಯ ವೃದ್ಧಿಗೆ ಮಾರ್ಗದರ್ಶನ ಮಾಡಿದೆ.ಶಿಕ್ಷಿತರಲ್ಲಿ ಪ್ರಬುದ್ಧತೆ ,ಅನ್ವೇಷಣೆ ಮನೋಭಾವ ಬೆಳೆಸಿದೆ.ಅವರ ಪ್ರತಿಭೆಯು ಸಮಾಜ ಹಾಗೂ ಸರ್ಕಾರಕ್ಕೆ ಪ್ರಯೋಜನಕಾರಿಯಾಗುವಂತೆ ಮಾಡಿದೆ. ಸಾಮಾಜಿಕ ಬದಲಾವಣೆಗೆ ತಂತ್ರಜ್ಞಾನದ ಸ್ಪರ್ಶ ನೀಡಿದೆ.ಭಾರತ ಸರ್ಕಾರದ “ಸ್ವಯಂ” ಕಾರ್ಯಕ್ರಮದಡಿ ಡಿಜಿಟಲ್ ಆವಿಷ್ಕಾರಗಳನ್ನೂ ಕೂಡ ಮಾಡಿದೆ.ಸುಮಾರು 3 ಸಾವಿರಕ್ಕೂ ಅಧಿಕ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವಲ್ಲಿ ಯಶಸ್ವಿಯಾಗಿದೆ.ಇಲ್ಲಿನ ಹಳೆಯ ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ದಾಟಿ,ಯಶಸ್ಸು ಸಾಧಿಸಿ ಅನೇಕ ಮೈಲಿಗಲ್ಲುಗಳನ್ನು ವಿವಿಧ ರಂಗಗಳಲ್ಲಿ ಸ್ಥಾಪಿಸಿದ್ದಾರೆ.ಅವರ ಅನುಭವಗಳ ಪ್ರಯೋಜನ ಪಡೆಯಬೇಕು ಎಂದರು.

    ದಿ ಮೇಕಿಂಗ್ ಆಫ್ ಎ ಕ್ಯಾಂಪಸ್ ಐಐಎಂ ಬೆಂಗಳೂರು (The Making of Campus IIM Bengaluru) ಕೃತಿ ಬಿಡುಗಡೆಗೊಳಿಸಿದ ರಾಜ್ಯಪಾಲರಾದ  ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ,ಕರ್ನಾಟಕವು ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.ಇಲ್ಲಿನ ಐಐಎಂ ದೇಶದ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಸೆಂಟರ್ ಫಾರ್ ಸಾಫ್ಟ್‌ವೇರ್ ಹಾಗೂ ಸಾಫ್ಟ್‌ವೇರ್ ಮ್ಯಾನೇಜ್‌ಮೆಂಟ್ ಕೋರ್ಸುಗಳ ಮೂಲಕ ಬೆಂಗಳೂರು ದೇಶದ ಐಟಿ ಹಬ್ ಆಗಿ ಬೆಳೆಯಲು ಐಐಎಂ ತನ್ನ ಕೊಡುಗೆ ನೀಡಿದೆ.ಇಲ್ಲಿನ ಅಕಾಡೆಮಿಕ್ ಅಧ್ಯಯನಗಳು ಸಮಾಜ ಹಾಗೂ ಸರ್ಕಾರದ ನೀತಿಗಳಿಗೆ,ವಿಕಾಸಕ್ಕೆ ಸದ್ಬಳಕೆಯಾಗಲಿ.ದೇಶವನ್ನು ಉನ್ನತ ಆರ್ಥಿಕ ವ್ಯವಸ್ಥೆಯಾಗಿ ರೂಪಿಸುವ ಕಾರ್ಯಕ್ಕೆ ಸಂಸ್ಥೆ ಕೈಜೋಡಿಸಲಿ ಎಂದರು.ಐಐಎಂಬಿ ಸುವರ್ಣ ಮಹೋತ್ಸವ ಅಂಗವಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

    ಇದೇ ಸಂದರ್ಭದಲ್ಲಿ ಐಐಎಂಬಿ ಕುರಿತು ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಸಂಸ್ಥಾಪನಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿರುವ 50 ಗಂಟೆಗಳ ರಿಲೇ ವಾಕ್‌ಥಾನ್‌ಗೆ ರಾಷ್ಟ್ರಪತಿಯವರು ವೇದಿಕೆಯಲ್ಲಿ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿ,ಚಾಲನೆ ನೀಡಿದರು.

    ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ  ಡಾ.ದೇವಿಪ್ರಸಾದ ಶೆಟ್ಟಿ ಅವರು ಸ್ವಾಗತಿಸಿ ಐಐಎಂಬಿ ಬೆಳವಣಿಗೆಗೆ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಕೊಡುಗೆಗಳನ್ನು ಸ್ಮರಿಸಿದರು.

    ಐಐಎಂಬಿ ನಿರ್ದೇಶಕ ಪ್ರೋ.ಋಷಿಕೇಷ ಟಿ.ಕೃಷ್ಣನ್ ಅವರು ಸುವರ್ಣಮಹೋತ್ಸವ ಹಾಗೂ ಸಂಸ್ಥೆಯ ಬೆಳವಣಿಗೆಗಳ ಕುರಿತು ಮಾತನಾಡಿ, 1970 ರ ದಶಕದಲ್ಲಿ ಪ್ರಾರಂಭವಾದ ಸಂಸ್ಥೆಯು ಆಗ ಸಾರ್ವಜನಿಕ ವಲಯದ ಉದ್ಯಮಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಿತ್ತು.1990 ರ ದಶಕದಲ್ಲಿ ಬದಲಾದ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಐಐಎಂ ಕೂಡ ತನ್ನ ಅಧ್ಯಯನ, ಸಂಶೋಧನಾ ಕ್ರಮಗಳನ್ನು ಮಾರ್ಪಡಿಸಿಕೊಂಡಿತು.ಪ್ರಸ್ತುತ ವಿವಿಧ 75 ಕೋರ್ಸುಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.ಡಿಜಿಟಲ್ ವೇದಿಕೆಗಳ ಮೂಲಕವೂ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಲಾಗಿದೆ.ಹೊಸ ನಾಲ್ಕು ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಬೆಂಗಳೂರಿನ ಹೊರವಲಯದಲ್ಲಿ ನೂತನ ಕ್ಯಾಂಪಲ್ ತಲೆ ಎತ್ತಿದೆ .ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

    ಸಮಾರಂಭದ ನಂತರ ಎನ್.ಎಸ್.ರಾಘವನ್ ಉದ್ಯಮಶೀಲತೆ ತರಬೇತಿ ಕೇಂದ್ರದಲ್ಲಿ (NSRCEL) ಕೆಲಕಾಲ ಮಹಿಳಾ ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕೆಲಕಾಲ ಸಂವಾದ ನಡೆಸಿದರು.

    admin
    • Website

    Related Posts

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ

    November 17, 2025

    ತುಮಕೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪ್ರಥಮ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ನ.19ರಂದು ಹಿಂದುಳಿದ ವರ್ಗಗಳ…

    ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ

    November 17, 2025

    ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್

    November 17, 2025

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.