ಛತ್ತೀಸ್ ಗಢದಲ್ಲಿ ಬಿಜೆಪಿ ನಾಯಕ ರತನ್ ದುಬೆ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾವೋವಾದಿಗಳ ದಾಳಿಯಲ್ಲಿ ರತನ್ ದುಬೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಾರಾಯಣಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹತ್ಯೆಯ ಹಿಂದೆ ಮಾವೋವಾದಿಗಳ ದಾಳಿ ಇದೆಯೇ ಎಂಬುದು ತನಿಖೆಯ ನಂತರವಷ್ಟೇ ದೃಢಪಡಬಹುದು ಎಂದು ಬಸ್ತಾರ್ ಐಜಿ ಹೇಳಿದ್ದಾರೆ.
ಬಿಜೆಪಿ ನಾಯಕ ರತನ್ ದುಬೆ ಅವರನ್ನು ಚುನಾವಣೆಗೆ ಮೂರು ದಿನಗಳ ಮೊದಲು ಹತ್ಯೆ ಮಾಡಲಾಗಿದೆ. ರತನ್ ದುಬೆ ಅವರ ಮೃತದೇಹವನ್ನು ಛತ್ತೀಸ್ ಗಢದ ನಾರಾಯಣಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.


