ಇತ್ತೀಚಿನ ದಿನಗಳಲ್ಲಿ ನೈಟ್ರಸ್ ಆಕ್ಸೆಡ್ ನ ಸಣ್ಣ ಡಬ್ಬಿಗಳ ಮಾರಾಟದಲ್ಲಿ ಏರಿಕೆಯ ನಂತರ, ಯುನೈಟೆಡ್ ಕಿಂಗಡಮ್ ನಗುವ ಅನಿಲವನ್ನು ನಿಷೇಧಿಸಿದೆ.
ಯುವಕರು ಮೋಜಿಗಾಗಿ ಈ ನಗುವ ಅನಿಲವನ್ನು ವೇಗವಾಗಿ ಒಳಗಡೆ ಎಳೆದುಕೊಳ್ಳುತ್ತಿದ್ದು, ಬ್ರಿಟನ್‌ನಲ್ಲಿ ಲಾಫಿಂಗ್ ಗ್ಯಾಸ್ ಹೊಂದುವುದು ಕಾನೂನುಬಾಹಿರವಾಗಿದೆ.
ಬುಧವಾರದಿಂದ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದ್ದು, ಪುನರಾವರ್ತಿತ ಅಪರಾಧಿಗಳಿಗೆ ಎರಡು ವರ್ಷಗಳವರೆಗೆ ಮತ್ತು ಡೀಲರ್ ಗಳಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.


