nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025
    Facebook Twitter Instagram
    ಟ್ರೆಂಡಿಂಗ್
    • ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    • ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!
    • ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು
    • ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
    • ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
    • ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
    • ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಿನಲ್ಲೊಬ್ಬ ಕೌನ್ಸೆಲಿಂಗ್ ಕಳ್ಳ ಸ್ವಾಮೀಜಿ, ಮುಗ್ಧ ಜನರೇ ಈತನ ಟಾರ್ಗೆಟ್: ದೇವಸ್ಥಾನದಲ್ಲಿ ನಡೆಯಿತು ಹೈಡ್ರಾಮಾ
    ಕೊರಟಗೆರೆ November 15, 2023

    ತುಮಕೂರಿನಲ್ಲೊಬ್ಬ ಕೌನ್ಸೆಲಿಂಗ್ ಕಳ್ಳ ಸ್ವಾಮೀಜಿ, ಮುಗ್ಧ ಜನರೇ ಈತನ ಟಾರ್ಗೆಟ್: ದೇವಸ್ಥಾನದಲ್ಲಿ ನಡೆಯಿತು ಹೈಡ್ರಾಮಾ

    By adminNovember 15, 2023No Comments2 Mins Read
    koratagere news

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ತುಮಕೂರು : ಜನರು ತಮ್ಮ ಕಷ್ಟಗಳನ್ನು ಪರಿಹರಿಸಲು ದೇವರ ಮೇಲೆ ನಂಬಿಕೆ ಇಟ್ಟು ದೇವಸ್ಥಾನಗಳಿಗೆ ಹೋಗುವುದು ಸಹಜ ಆದರೆ ಇಲ್ಲೊಬ್ಬ ಉಡಾಳ ಪೂಜಾರಿ ದೇವಸ್ಥಾನಕ್ಕೆ ಬರುವ ಮುಗ್ಧ ಜನರನ್ನ ಯಾಮರಿಸಿ ಅವರಿಂದ ಹಣ ಪಿಕುವ ಕೆಲಸದಲ್ಲಿ ತೊಡಗಿದ್ದಾನೆ. ಕುಟುಂಬಗಳನ್ನ ಹೊಡೆಯುವ ಕೆಲಸ ಮಾಡಿ ದೇವರ ಹೆಸರಿನಲ್ಲಿ ಜನರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸುವ ಆರೋಪ ಕೇಳಿ ಬಂದಿದೆ..


    Provided by

    ತುಮಕೂರು ತಾಲ್ಲೂಕು ಕೋರ ಹೋಬಳಿಯ ಚಿಕ್ಕತೊಟ್ಲುಕೆರೆಯಲ್ಲಿ ಇರುವ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವ  ಶಿವಣ್ಣ ಎಂಬ ಹೆಸರಿನ ಪೂಜಾರಿ ಮನೆಯಲ್ಲೇ ದೇವಸ್ಥಾನ ನಿರ್ಮಾಣ ಮಾಡಿಕೊಂಡು ಬೆಂಗಳೂರು ಮೂಲದ ಯುವಕ ರಂಜಿತ್ ರ ಮನ ಪರಿವರ್ತನೆ ಮಾಡಿ ಕುಟುಂಬದಿಂದ ಬೇರ್ಪಡಿಸಿ ಆತನನ್ನ ಅಕ್ರಮವಾಗಿ ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಆರೋಪ ಕೇಳಿ ಬಂದಿತ್ತು..

    ಅದರ ಮಾಹಿತಿಯ ಮೇರೆಗೆ  ನೆಲಮಂಗಲ ಮೂಲದ ಕುಮಾರ್ ಕುಟುಂಬ ಹಾಗೂ ಕರ್ನಾಟಕ ರಣಧೀರರ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು ಹಾಗೂ ಸಂಘಟನೆಯ ಕಾರ್ಯಕರ್ತರ ತಂಡ ದಿಡೀರ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪೂಜಾರಿ ಬಳಿ ಇದ್ದ ಯುವಕನಿಂದ ಬೃಹತ್ ಹೈ ಡ್ರಾಮವೇ ನಡೆಯಿತು…

    ಪೋಷಕರಿಂದ ದೂರವಿದ್ದ ಯುವಕ ತಾನು ಪೋಷಕರೊಂದಿಗೆ ಹೋಗುವುದಿಲ್ಲ ನಾನು ಇಲ್ಲೇ ಇರುತ್ತೇನೆ ಎಂದು ಮಂಡು ಹಿಡಿದು ಕೂತಿದ್ದ ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಮತ್ತೊಂದು ಬಾಲಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದು ಸಹ  ಕಂಡುಬಂದಿತ್ತು.

    ಇದರ ಜಾಡು ಹಿಡಿದು ಹೊರಟ ಸಂಘಟನೆಯ ಕಾರ್ಯಕರ್ತರು ಬಾಲಕಿ ಹಾಗೂ ಸ್ವಾಮೀಜಿಯ ಬಳಿ ಬಾಲಕಿಯ ಬಗ್ಗೆ ವಿಚಾರಿಸಿದಾಗ ತಾಯಿ ಇಲ್ಲದ ಬಾಲಕಿಯನ್ನು ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಂಘಟನೆಯ ಕಾರ್ಯಕರ್ತರು ಮಕ್ಕಳ ರಕ್ಷಣಾ ಘಟಕಕ್ಕೆ ಮತ್ತು ಪೊಲೀಸ್ ನವರಿಗೆ ಮಾಹಿತಿ ನೀಡಿದರು, ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ಭೇಟಿ ನೀಡಿದರೂ, ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ತಂಡದಿಂದ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ರಕ್ಷಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

    ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು. ಕೆ. ಆರ್. ಮಾತನಾಡಿ ಮೌರ್ಯತೆಯ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನ ಈತ ವಂಚಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಇದೆ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಸಹ ದೇವಸ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು ಸ್ಥಳೀಯರು ದೇವಸ್ಥಾನಕ್ಕೆ ಬರುವುದಿಲ್ಲ ಆದರೆ ಬೇರೆ ಊರಿನ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದ್ದು ಈತ ಸ್ಥಳೀಯ ಹಲವು ಸ್ಥಳಗಳಲ್ಲಿ ವಾಮಾಚಾರದ ಮೊರೆ ಹೋಗಿದ್ದು ಇದರಿಂದ ಸಾರ್ವಜನಿಕರು ಸಹ ಹೈರಾಳಾಗಿದ್ದು ಕೂಡಲೇ ಈ ದೇವಸ್ಥಾನವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

    ಇನ್ನು ಕೊನೆಗೆ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ಒಂದೆಡೆ ರಕ್ಷಿಸಿದರೆ ಮತ್ತೊಂದೆಡೆ ಪೊಲೀಸರು ಯುವಕನಾಗಿ ಬುದ್ಧಿವಾದ ಹೇಳಿ ಪೋಷಕರೊಂದಿಗೆ ಮನೆಗೆ ತೆರಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಯುವಕ ಮನೆ ಸೇರಲು ಮುಂದಾಗಿದ್ದಾನೆ.

    ಅದೇನೇ ಇರಲಿ ದೇವಸ್ಥಾನದ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನು ದೇವರ ಹೆಸರಿನಲ್ಲಿ ಯಾಮರಿಸುವ ಇಂತಹ ನಕಲಿ ಪೂಜಾರಿಗಳಿಗೆ ತಕ್ಕ ಪಾಠ ಕಲಿಸುವುದು ಎಲ್ಲರ ಕೆಲಸ ಎಂದರೆ ತಪ್ಪಾಗಲಾರದು…

    ಇನ್ನು ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ಎನ್ ದೇವರಾಜು, ಶಿವಕುಮಾರ್,ಮಂಜುಸ್ವಾಮಿ ಎಂ ಎನ್,ಸುರೇಶ್,ರವಿಕುಮಾರ್,ದೇವರಾಜು,ಕೋರ ಪೋಲೀಸ್ ಠಾಣೆಯ ಸಿಪಿಐ ಲಕ್ಷ್ಮಿಕಾಂತಯ್ಯ,ಪಿಎಸ್ ಐ ಸಂಗಮೇಶ್,ಮಕ್ಕಳ ರಕ್ಷಣಾ ತಂಡದ ಅಧಿಕಾರಿಗಳು ವಕೀಲರಾದ ಶಿವಕುಮಾರ್ ಹಾಜರಿದ್ದರು.

    ಕೌನ್ಸೆಲಿಂಗ್ ಬಳಿಕ ಕಾನೂನು ಕ್ರಮ:

    ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸದ್ಯದ ವಿದ್ಯಮಾನಗಳಿಂದ ಬಾಲಕಿ ಬೆದರಿರುವ ಕಾರಣ ಸದ್ಯ ಬಾಲಕಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ. ಮಗುವಿಗೆ ಸೂಕ್ತ ಕೌನ್ಸೆಲಿಂಗ್ ನೀಡಿದ ನಂತರಹೇಳಿಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಲಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    admin
    • Website

    Related Posts

    30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಿದ ಜಪಾನಂದ ಸ್ವಾಮೀಜಿ

    June 28, 2025

    ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು: ತಹಶೀಲ್ದಾರ್ ಮಂಜುನಾಥ್ ಕೆ.

    June 27, 2025

    ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ

    June 19, 2025
    Our Picks

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ…

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.