ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ಕೆಲವು ದಿನಗಳಿಂದ ವಾಹನ ನೋಂದಣಿ ಸ್ಥಗಿತಗೊಂಡಿದೆ.
ಸೋಮವಾರದಿಂದಲೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ಹೊಸ ವಾಹನ ನೋಂದಣಿ ಮಾಡಲು ಉತ್ಸಾಹ ತೋರಿದವರಿಗೆ ನಿರಾಸೆ ಉಂಟಾಗಿದೆ.
ರಾಜ್ಯದ ವಾಹನ ವಿತರಕರು ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿದ್ದಾರೆ. ವಾಹನ ಖರೀದಿಗೆ ಹಬ್ಬದ ದಿನಗಳು ಮಂಗಳಕರ ಎಂದು ತಿಳಿದು ವಾಹನ ಖರೀದಿಗೆ ಮುಂದಾಗಿದ್ದ ನಮ್ಮ ಅನೇಕ ಗ್ರಾಹಕರಿಗೆ ನಿರಾಸೆಯಾಗಿದೆ.